ETV Bharat / state

ಹಣ ದುಪ್ಪಟ್ಟು ಮಾಡಿಕೊಡುವ ಆಸೆ: ನಕಲಿ ನೀಡಿ, ಅಸಲಿ ಹಣದೊಂದಿಗೆ ಪರಾರಿಯಾಗಿದ್ದ ಖದೀಮರ ಬಂಧನ

ಹಣ ದುಪ್ಪಟ್ಟ ಮಾಡುವುದಾಗಿ ಹೇಳಿ ಅಸಲಿ ನೋಟು ತೆಗೆದುಕೊಂಡು ನಕಲಿ ನೋಟು ನೀಡಿ ಪರಾರಿಯಾಗುತ್ತಿದ್ದ ಖದೀಮರ ಬಂಧನವಾಗಿದೆ.

ಖದೀಮರ ಬಂಧನ
author img

By

Published : May 7, 2019, 6:43 AM IST

ಚಿಕ್ಕಬಳ್ಳಾಪುರ : ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಮಾಯಕರನ್ನು ಟಾರ್ಗೆಟ್ ಮಾಡಿ ಹಣ ದುಪ್ಪಟ್ಟ ಮಾಡುವುದಾಗಿ ಹೇಳಿ ಅಸಲಿ ನೋಟುಗಳನ್ನು ತೆಗೆದುಕೊಂಡು ನಕಲಿ ನೋಟುಗಳನ್ನು ನೀಡಿ ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಸದ್ಯ ಒಬ್ಬ ಮಹಿಳೆ ಸೇರಿ 11 ಜನ ಖತರ್ನಾಕ್ ಗ್ಯಾಂಗ್ ಅಂದರ್ ಆಗಿರುವ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಂಚನೆ ಮಾಡಿದ್ದ ಖದೀಮರು ಜಿಲ್ಲೆಯ ಮುರಗಮಲ್ಲದಲ್ಲಿ ಕೈಚಳಕ ತೋರಿದ್ದು, ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.75 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

Intro:ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ 6 ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.Body:ಒಬ್ಬ ಮಹಿಳೆ ಸೇರಿ ಹನ್ನೊಂದು ಜನ ಖತರ್ನಾಕ್ ಗ್ಯಾಂಗ್ ಅಂದರ್ ಆಗಿರುವ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಮಾಯಕರನ್ನು ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್ ಅಸಲಿ ನೋಟುಗಳನ್ನು ತೆಗೆದುಕೊಂಡು ನಕಲಿ ನೋಟುಗಳನ್ನು ನೀಡಿ ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾಗುತ್ತಿದ್ದರು.

ಪ್ರತಿಯೊಬ್ಬರ ಬಳಿಯೂ ಲಕ್ಷಾಂತರ ರೂಪಾಯಿ ದುಪ್ಪಟ್ಟು ಮಾಡಿಕೊಡುತ್ತೇವೆ ವಂಚನೆ ಮಾಡಿ ಪರಾರಿಯಾಗುತ್ತಿರುವುದಾಗಿ ತಿಳಿದು ಬಂದಿದೆ. ಆಂದ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮ ತಲೆಗೆ ಬುದ್ದಿ ಹೇಳಿ ಲಕ್ಷಾಂತರ ಎಗರಿಸಿರುವುದಾಗಿ ಶಂಕೆ ವ್ಯಕ್ತವಾಗಿದ್ದು ಪೊಲೀಸ್ ಠಾಣೆ ಗಳಲ್ಲಿ ದೂರು ದಾಖಲಾಗಿತ್ತು.

ಆಂದ್ರಪ್ರದೇಶದ ಅನಂತಪುರ,ಸೇರಿದಂತೆ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುರಗಮಲ್ಲದಲ್ಲಿ ಖದೀಮರ ಕೈಚಳಕ ತೋರಿದ್ದು ಖಚಿತ ಮಾಹಿತಿ ಮೇಲೆ ಕೆಂಚಾರ್ಲಹಳ್ಳಿ ಪೊಲೀಸರು ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಗಳಿಂದ ಒಂದು ಲಕ್ಷ ಎಪ್ಪತೈದು ಸಾವಿರ ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.