ETV Bharat / state

ಬಾಗೇಪಲ್ಲಿ ಪೊಲೀಸರ ನೇತೃತ್ವದಲ್ಲಿ ಹಿಂದೂ, ಮುಸ್ಲಿಂ ಮುಖಂಡರ ಶಾಂತಿ ಸಭೆ - corona prevention

ಕೊರೊನಾ ವೈರಸ್​ಗೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಅದು ಎಲ್ಲರನ್ನೂ ಕೊಲ್ಲುತ್ತಿದೆ. ಹಾಗಾಗಿ, ಎಲ್ಲರೂ ಒಟ್ಟಾಗಿ ಈ ಹೆಮ್ಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಿ, ಸರ್ಕಾರದ ಆದೇಶವನ್ನು ಪಾಲಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

Hindu and Muslim peaceful gathering
ಹಿಂದೂ, ಮುಸ್ಲಿಂ ಶಾಂತಿ ಸಭೆ
author img

By

Published : Apr 9, 2020, 10:36 AM IST

ಬಾಗೇಪಲ್ಲಿ: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಿಪಿಐ ನಯಾಜ್ ಬೇಗ್ ಮತ್ತು ಪಿಎಸ್ಐ ಕೆ.ಜಿ.ಸುನಿಲ್ ಕುಮಾರ್ ನೇತೃತ್ವದಲ್ಲಿ ಹಿಂದೂ, ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಶಾಂತಿ ಸಭೆ ನಡೆಯಿತು.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹಿಂದೂ, ಮುಸ್ಲಿಂ ಭೇದಭಾವ ಮರೆತು ಎಲ್ಲರೂ ಒಗ್ಗಟ್ಟಾಗಿ ಮಾನವರಾಗಿ ಚಿಂತನೆ ಮಾಡಬೇಕಿದೆ ಎಂದು ಬಾಗೇಪಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಜಿ ಸುಧಾಕರ್ ಅಭಿಪ್ರಾಯಪಟ್ಟರು.

ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಸೀದಿಗಳನ್ನು ಬಂದ್ ಮಾಡಲಾಗಿದೆ. ಶುಕ್ರವಾರದ ಜುಮಾಃ ನಮಾಜ್ ಕೂಡ ರದ್ದು ಗೊಳಿಸುವಂತೆ ಮೌಲ್ವಿಗಳು ಫತ್ವಾ ಜಾರಿ ಮಾಡಿದ್ದಾರೆ. ಇದೇ ತಿಂಗಳು 9 ರಂದು ನಡೆಯುವ ಶಬೇ ಬರಾತ್ ಆಚರಣೆಯನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಮಾಡಬೇಕು ಎಂದು ಈ ವೇಳೆ ಮನವಿ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.