ಚಿಕ್ಕಬಳ್ಳಾಪುರ: ಲಸಿಕೆ ಬೇಡ ಎನ್ನುವವರಿಗೆ ಬಲವಂತವಾಗಿ ವ್ಯಾಕ್ಸಿನ್ ಹಾಕಲಾಗುತ್ತಿದೆ. ಈ ನಡುವೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಾಮಗಾನಹಳ್ಳಿಯಲ್ಲಿ ಗ್ರಾಮದಲ್ಲಿ ಲಸಿಕೆ ಪಡೆದ ವೃದ್ಧೆಯೊಬ್ಬರು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ನಡೆದಿದೆ.
ಗ್ರಾಮೀಣ ಭಾಗದಲ್ಲಿ ಜಿಲ್ಲಾಡಳಿತ ಲಸಿಕಾ ಅಭಿಯಾನ ಏರ್ಪಡಿಸಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿರಿಯ ನಾಗರಿಕರು ಹಿಂದೇಟು ಹಾಕುತ್ತಿದ್ದು, ವ್ಯಾಕ್ಸಿನ್ ಹಾಕಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.
ಗೌರಿಬಿದನೂರು ತಾಲೂಕಿನ ತೊಂಡೆಭಾವಿ ಹೋಬಳಿಯ ಕಾಮಗಾನಹಳ್ಳಿ ಗ್ರಾಮದಲ್ಲಿ ಲಸಿಕೆ ಹಾಕಿಸಿಕೊಳ್ಳಲು ವೃದ್ಧೆಯೊಬ್ಬರು ನಿರಾಕರಿಸಿದ್ದರು. ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸಬೇಕು. ಲಸಿಕೆ ಪಡೆದುಕೊಂಡು ಆರೋಗ್ಯ ಹದಗೆಟ್ಟರೆ ನನ್ನನ್ನು ನೋಡುವವರು ಯಾರೂ ಇಲ್ಲ ಎಂದು ಪಟ್ಟು ಹಿಡಿದು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು.
ಈ ವೇಳೆ, ವೃದ್ಧೆಯ ಮಾತಿಗೆ ತಲೆಕೆಡಿಸಿಕೊಳ್ಳದ ಆರೋಗ್ಯ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಲಸಿಕೆ ಹಾಕಿದ್ದಾರೆ. ಇದರಿಂದ ಕೋಪಗೊಂಡ ವೃದ್ಧೆ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ವೈರಲ್ ಆಗುತ್ತಿದೆ.
ಓದಿ: ಅಳುತ್ತಿದ್ದ ಮಗು ಎತ್ತಿಕೊಂಡು ಸಂತೈಸಿದ ಸಿಇಒ ಫೌಜಿಯಾ ತರುನ್ನುಮ್.. ತಾಯಿ ಲಸಿಕೆ ಪಡೆಯಲು ನೆರವು..