ETV Bharat / state

ಹೆಚ್​ಡಿಕೆ ಸಿಎಂ ಆಗುತ್ತಾರೆ, ಜೆ.ಕೆ. ಕೃಷ್ಣಾರೆಡ್ಡಿ ಮಂತ್ರಿ ಆಗೋದು ಖಚಿತ: ಸಿಎಂ ಇಬ್ರಾಹಿಂ ಭವಿಷ್ಯ - HDK will become CM and J K Krishnareddy is sure to become a minister says CM Ibrahim

ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಸಿಎಂ ಆಗುವುದು ಖಚಿತ. ಅಲ್ಲದೇ ಜೆ.ಕೆ. ಕೃಷ್ಣಾರೆಡ್ಡಿ ಅವರು ಹ್ಯಾಟ್ರಿಕ್​ ಗೆಲುವು ಸಾಧಿಸಿ ಮಂತ್ರಿಯಾಗುತ್ತಾರೆ ಎಂದು ಸಿ.ಎಂ. ಇಬ್ರಾಹಿಂ ಭವಿಷ್ಯ ಹೇಳಿದ್ದಾರೆ.

ಸಿಎಂ ಇಬ್ರಾಹಿಂ ಭವಿಷ್ಯ
ಸಿಎಂ ಇಬ್ರಾಹಿಂ ಭವಿಷ್ಯ
author img

By

Published : Jul 13, 2022, 10:20 PM IST

ಚಿಂತಾಮಣಿ: ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಕೆ. ಕೃಷ್ಣಾರೆಡ್ಡಿ ಅವರು ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿ, ಮಂತ್ರಿ ಆಗುತ್ತಾರೆ. ಅಲ್ಲದೇ 2023 ರ ವಿಧಾನ ಸಭೆಯ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಸಿಎಂ ಆಗುವುದು ಖಚಿತ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.

ಭವಿಷ್ಯ ನುಡಿದ ಸಿಎಂ ಇಬ್ರಾಹಿಂ

ಅವರು ಇಂದು ತಾಲೂಕಿನ ಮುರುಗಮಲ್ಲ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾಗೆ ಭೇಟಿ ನೀಡಿದರು. ನಂತರ ಕಡಪ ಹೈ ವೇ ರಸ್ತೆಯಲ್ಲಿರುವ ಜೆ ಕೆ ಭವನಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಜೆಡಿಎಸ್ ನನಗೆ ಪಾರ್ಟಿ ಅಲ್ಲ. ಅದು ನನ್ನ ಕುಟುಂಬ. ನಾನು ಕಳೆದ ಒಂದು ವರ್ಷದಿಂದ ಏನು ಹೇಳಿದೆ, ಅದೇ ಆಗುತ್ತಿದೆ ಎಂದರು.

ನಾಡಿನಲ್ಲಿ ಹಿಂದೂ – ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು. ನನಗೇನು ಬೇಕಿಲ್ಲ. ಇದು ನನ್ನ ಆಸೆ. ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ಎಷ್ಟೇ ಕುಣಿದಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಸರ್ವ ಧರ್ಮ ಸಮನ್ವಯ ಉಳಿಯಬೇಕು ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವದ ಪೂರ್ವ ಸಿದ್ಧತಾ ಸಭೆ - ಡಿಕೆಶಿ ಗೈರು!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.