ಬಾಗೇಪಲ್ಲಿ : ಕೊರೊನಾ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದ ಗ್ರೀನ್ ಇಂಡಿಯಾ ಫೋರಂ ಸಂಘದ ಅಧ್ಯಕ್ಷರಾದ ಸೈದ್ ಸಿದ್ದೀಕ್ ನೇತೃತ್ವದಲ್ಲಿ ವಿವಿಧ ವಾರ್ಡ್‌ನಲ್ಲಿ ವಾಹನಗಳಲ್ಲಿ ಸಂಚರಿಸಿ ಮನೆ ಮನೆಗೆ ಹೋಗಿ ಜಾಗೃತಿ ಕರಪತ್ರ ಹಂಚಿ ಅರಿವು ಮೂಡಿಸಿದರು.
ಗ್ರೀನ್ ಇಂಡಿಯಾ ಫೋರಂ ವತಿಯಿಂದ ಬಾಗೇಪಲ್ಲಿ ಪಟ್ಟಣದಲ್ಲಿ ಕೊರೊನಾ ವೈರಸ್ ಬಗ್ಗೆ ಕರಪತ್ರಗಳನ್ನು ಹಂಚಿ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಗ್ರೀನ್ ಇಂಡಿಯಾ ಫೋರಂನ ಮಹೇಶ್ ಬುಜ್ಜಿ, ಮನೀಶ್, ಅನಿಲ್, ಕದೀರ್‌ಖಾನ್ ಹಾಗೂ ಬಾಬು ಸೇರಿದಂತೆ ಮತ್ತಿತರರು ಹಾಜರಿದ್ದರು.