ETV Bharat / state

ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ದಾಟಿಸಲು ಹೋಗಿ ಕೊಚ್ಚಿಹೋದ ಗ್ರಾಪಂ ಸದಸ್ಯ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು, ಈ ರಸ್ತೆ ಮೂಲಕ ಗಂಗಾಧರ್ ಎಂಬಾತ ದ್ವಿಚಕ್ರ ವಾಹನದಲ್ಲಿ ವಾಪಾಸಾಗುತ್ತಿದ್ದಾಗ ಈ ಅವಘಡ ನಡೆದಿದೆ.

gram-panchayat-member-drowned-away-in-flood-water
ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ದಾಟಿಸಲು ಹೋಗಿ ಕೊಚ್ಚಿಹೋದ ಗ್ರಾಪಂ ಸದಸ್ಯ
author img

By

Published : Nov 13, 2021, 7:29 AM IST

Updated : Nov 13, 2021, 8:19 AM IST

ಚಿಕ್ಕಬಳ್ಳಾಪುರ: ಮಳೆಯಿಂದ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ದಾಟಿಸಲು ಹೋದ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ (Kammaguttahalli Gram Panchayat) ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ನಡೆದಿದೆ. ಮಂಡಿಕಲ್ ಹೋಬಳಿಯ ನವಿಲುಗುರ್ಕಿ ಬಳಿ ನದಿ ನೀರು ಉಕ್ಕಿ ಹರಿಯುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನ ದಾಟಿಸುವಾಗ ನೀರಿನ ಸೆಳೆತಕ್ಕೆ ಸಿಲುಕಿ ಗಂಗಾಧರ್ ಗೌಡ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

ರಸ್ತೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬೈಕ್ ದಾಟಿಸಲು ಹೋಗಿ ಕೊಚ್ಚಿಹೋದ ಗ್ರಾಪಂ ಸದಸ್ಯ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ (Flood in Karnataka) ನೀರಿನ ಹರಿವು ಹೆಚ್ಚಾಗಿದ್ದು, ಈ ರಸ್ತೆ ಮೂಲಕ ರಾಮಪಟ್ಟಣ ಗ್ರಾಮದಿಂದ ನವಿಲು ಗುರ್ಕಿಗೆ ಗಂಗಾಧರ್ (Gram Panchayat member) ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದರು. ಈ ವೇಳೆ, ನೀರಿನ ರಭಸಕ್ಕೆ ಕೆಳಗೆ ಬಿದ್ದು, ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಗುಡಿಬಂಡೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಆರಂಭಿಸಿದ್ದಾರೆ. ಜೊತೆಗೆ ಸ್ಥಳದಲ್ಲಿ ಗುಡಿಬಂಡೆ ಹಾಗೂ ಪೇರೆಸಂದ್ರ ಪೊಲೀಸರು ಬೀಡುಬಿಟ್ಟಿದ್ದಾರೆ.

ಇದನ್ನೂ ಓದಿ: ಫುಟ್ಬಾಲ್​ ಆಡ್ತಿದ್ದಾಗ ಏಕಾಏಕಿ ಬಿದ್ದು ಮಗು ಸಾವು.. CCTVಯಲ್ಲಿ ವಿಡಿಯೋ ಸೆರೆ

Last Updated : Nov 13, 2021, 8:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.