ಬಾಗೇಪಲ್ಲಿ: ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಂಡೇ ಲಾಕ್ಡೌನ್ಗೆ ತಾಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಚಾರ ಸಹ ಸ್ಥಗಿತಗೊಂಡಿದೆ.
ಬಾಗೇಪಲ್ಲಿ ಪಟ್ಟಣದಲ್ಲಿ ನಿನ್ನೆ ಸಂಜೆಯಿಂದಲೇ ಪೊಲೀಸರು ಗಸ್ತು ತಿರುಗುತ್ತಿದ್ದು ಹಾಲು, ಔಷಧಿ ಸೇರಿದಂತೆ ಇನ್ನಿತರೆ ಅವಶ್ಯಕ ಅಂಗಡಿಗಳು ಮಾತ್ರ ತೆರೆದಿವೆ. ಬಸ್ ಸೇರಿದಂತೆ ಆಟೋ, ಲಾರಿಗಳ ಸಂಚಾರ ಸಹ ಕಂಡುಬಂದಿಲ್ಲ.
ವಿನಾಕಾರಣ ಓಡಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ನಿರೀಕ್ಷಕರಾದ ನಯಾಜ್ ಬೇಗ್ ಎಚ್ಚರಿಕೆ ನೀಡಿದ್ದಾರೆ.