ಚಿಕ್ಕಬಳ್ಳಾಪುರ: ಆಷಾಢ ಮಾಸದ ಕಡೆ ಸೋಮವಾರದಂದು ಕೈಲಾಸ ಪರ್ವತಕ್ಕೇರಲು ಆಗದವರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಗೆ ಪ್ರದಕ್ಷಿಣೆ ಹಾಕಿದರೆ ಮುಕ್ತಿ ದೊರೆಯುತ್ತೆ ಅಂತಾರೆ ಇಲ್ಲಿನ ಜನರು.
ಪ್ರತಿ ವರ್ಷ ಆಷಾಢ ಮಾಸದ ಕಡೆ ಸೋಮವಾರದಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಗೆ ಪ್ರದಕ್ಷಿಣೆ ಹಾಕೋಕೆ ಸಾವಿರಾರು ಭಕ್ತರು ಜಮಾಯಿಸ್ತಾರೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಆಂಧ್ರದಿಂದ ಬರೋ ಭಕ್ತರು ಇವತ್ತು ಐದು ಬೆಟ್ಟಗಳ ಸಾಲಾನ್ನು ಹೊಂದಿರುವ ನಂದಿಗಿರಿಗೆ ಪ್ರದಕ್ಷಿಣೆ ಹಾಕೋ ಮೂಲಕ ತಮ್ಮ ಭಕ್ತಿ ಭಾವವನ್ನು ಹರಿಸುತ್ತಾರೆ.
ಕೈಲಾಸ ಪರ್ವತದಷ್ಟೇ ಪ್ರಖ್ಯಾತಿ ಹೊಂದಿರುವ ನಂದಿಯ ಭೋಗ ನಂದೀಶ್ವರ ದೇವಾಲಯದಿಂದ ಆರಂಭವಾಗುವ ಪ್ರದಕ್ಷಿಣೆ, ಸುಮಾರು 16 ಕಿ.ಮಿ ವ್ಯಾಪ್ತಿಯಲ್ಲಿ ಬೆಟ್ಟಕ್ಕೊಂದು ಸುತ್ತು ಇದೆ. ಈ ಹಾದಿಯ ಮಧ್ಯೆ ಸಿಗುವ ಕಣಿವೆ ಬಸವೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ಸಾವಿರಾರು ಭಕ್ತಾದಿಗಳು ಆಗಮಿಸಿ ಹಾಡು, ಭಜನೆ, ನೃತ್ಯದ ಮೂಲಕ ಪ್ರದಕ್ಷಿಣೆ ಸಾಗುತ್ತದೆ. ಸಾಗುವ ದಾರಿಯಲ್ಲಿ ಭಕ್ತಾಧಿಗಳು ಅಲ್ಲಲ್ಲಿ ಪ್ರಸಾದದ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಸುಮಾರು 81 ವರ್ಷದ ಇತಿಹಾಸ ಈ ಪ್ರದಕ್ಷಿಣೆಗಿದೆ.