ETV Bharat / state

ರಾತ್ರಿ ಕಳ್ಳತನ ಮಾಡಿ ಮುಂಜಾನೆ ಡ್ಯೂಟಿಗೆ ಹಾಜರ್ ಆದ ಸಿಬ್ಬಂದಿ.. - Etv Bharat Kannada

ಇಕಾಮ್​ ಆನ್​ಲೈನ್​ ಡೆಲಿವರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರಾತ್ರಿ ವೇಳೆ ತಾವು ಕೆಲಸ ಮಾಡುತ್ತಿದ್ದ ಅಂಗಡಿಗೆ ನುಗ್ಗಿ ಸುಮಾರು 4 ಲಕ್ಷ ರೂ ಹಣ ಕದ್ದು ಸಿಗಿಬಿದ್ದಿರುವ ಘಟನೆ ನಡೆದಿದೆ.

Kn_ckb
ಬಂಧಿತ ಆರೋಪಿ
author img

By

Published : Nov 15, 2022, 8:26 PM IST

ಚಿಕ್ಕಬಳ್ಳಾಪುರ: ಇಕಾಮ್​ ಎಕ್ಸ್‌ಪ್ರೆಸ್​ನಲ್ಲಿ ಕೆಲಸ‌ ಮಾಡುತ್ತಿದ್ದ ಸಿಬ್ಬಂದಿ ರಾತ್ರಿ ಕಳ್ಳತನ‌ ಮಾಡಿ ಮುಂಜಾನೆ ಅಮಾಯಕರಂತೆ ನಟಿಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

ತಾಲೂಕಿನ ದಿಮ್ಮಗಟ್ಟನಹಳ್ಳಿ ಸುದರ್ಶನ್, ಆಂಧ್ರ ಪ್ರದೇಶದ ಹಿಂದುಪುರ ತಾಲೂಕಿನ ಕಿರಿಕೇರಿ ಮಹೇಶ್,‌ ಗೌರಿಬಿದನೂರು ನಗರದ ಸಂತೆ ಮೈದಾನ ನಿವಾಸಿ ಮಂಜುನಾಥ್ ಬಂಧಿತರು. ಈ ಮೂವರು ಕಳೆದ ಒಂದು ವರ್ಷದಿಂದ ಮುನೇಶ್ವರ ಬಡವಣೆಯ ಇಕಾಮ್ ಎಕ್ಸ್‌ಪ್ರೆಸ್​ನಲ್ಲಿ ಅನ್​ಲೈನ್ ಡೆಲಿವರಿ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿದ್ದರು.

ನ.14 ರಂದು ರಾತ್ರಿ ತಾವು ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಿ ಸರಿಸುಮಾರು 4 ಲಕ್ಷ ಹಣವನ್ನು ಕದ್ದು ತಮಗೇನು ಸಂಬಂಧ ಇಲ್ಲ ಎಂಬಂತೆ ಪೊಲೀಸರಿಗೆ ಮಾಹಿತಿ ನೀಡಿ ಮಾಧ್ಯದವರಿಗೆ ಕಳ್ಳತನದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಬ್ಯಾಂಕ್ ರಜೆ ದಿನಗಳು ಸಾಲುಸಾಲಾಗಿ ಬಂದ ಹಿನ್ನಲೆ ಡೆಲಿವರಿ ಕೊಟ್ಟ ವಸ್ತುಗಳ ಹಣವನ್ನು ಕಟ್ಟದೇ ಅಂಗಡಿಯಲ್ಲಿಯೇ ಇಡಲಾಗಿತ್ತು.

ರಾತ್ರಿ ಕಳ್ಳತನ ಮಾಡಿ ಮುಂಜಾನೆ ಡ್ಯೂಟಿಗೆ ಹಾಜರ್ ಆದ ಸಿಬ್ಬಂದಿ

ಈ ವಿಚಾರ ತಿಳಿದ ಮೂವರು ಮಾಸ್ಕ್ ಧರಿಸಿ ಅಂಗಡಿಯ ಡೋರ್ ಮುರಿದು ಹಣ ಕಳವು ಮಾಡಿ ಸಿಸಿಟಿವಿ ದೃಶ್ಯಾವಳಿಯಿದ್ದ ಹಾರ್ಡ್ ಡಿಸ್ಕ್​ ಅನ್ನೂ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ತಾವು ಮುಟ್ಟಿದ ಜಾಗಕೆಲ್ಲ ಖಾರದಪುಡಿ ಎರಚಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಇನ್ನೂ ಘಟನೆಯ ಬಳಿಕ ತಮಗೇನು ಸಂಬಂಧವಿಲ್ಲವೆಬಂತೆ ಕಚೇರಿಗೆ ಭೇಟಿ ನೀಡಿ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಮಾಧ್ಯಮದವರಿಗೆ ಕಳ್ಳತನದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವುದಾಗಿ‌ ಮೂವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನ ಕಾನೂನಿಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಆನ್​​​​ಲೈನ್ ವಂಚನೆ ಪ್ರಕರಣ: 4 ಲಕ್ಷಕ್ಕೂ ಹೆಚ್ಚು ರೂ ಲಪಟಾಯಿಸಿದ ವಂಚಕರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.