ಚಿಕ್ಕಬಳ್ಳಾಪುರ: ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ತಾಲೂಕಿನ ಬಿಸೇಗಾರಹಳ್ಳಿ, ಶೆಟ್ಟಿಗೆರೆ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬಂದು ಕಾಲ ಕಳೆಯುವಂತಾಗಿದೆ.
ಎರಡು ಗ್ರಾಮಗಳಲ್ಲಿ ಏಕಕಾಲದಲ್ಲಿ ಬೆಳಗ್ಗೆ 7 ಗಂಟೆಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಚಿಂತಾಮಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ಹಾಗೂ ಮಂಡಿಕಲ್ ವ್ಯಾಪ್ತಿಯ ಹಲವು ಗ್ರಾಮಗಳಲ್ಲೂ ಇದೇ ಅನುಭವ ಉಂಟಾಗಿದೆ.
2018ರಲ್ಲಿ ಬಾಗೇಪಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 3.0 ತೀವ್ರತೆ ದಾಖಲಾಗಿತ್ತು.
ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್: ಬೆಂಗಳೂರಿನಿಂದ ಸುಮಾರು 66 ಕಿಲೋಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದ್ದು, 3.3ರ ತೀವ್ರತೆಯಲ್ಲಿ ಹಾಗೂ 3.1ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಟ್ವೀಟ್ ಮಾಡಿದೆ.
-
Earthquake of Magnitude:3.3, Occurred on 22-12-2021, 07:14:32 IST, Lat: 13.55 & Long: 77.76, Depth: 23 Km ,Location: 66km NNE of Bengaluru, Karnataka, India for more information download the BhooKamp App https://t.co/iax6vbE3wO pic.twitter.com/irvoaQmaMF
— National Center for Seismology (@NCS_Earthquake) December 22, 2021 " class="align-text-top noRightClick twitterSection" data="
">Earthquake of Magnitude:3.3, Occurred on 22-12-2021, 07:14:32 IST, Lat: 13.55 & Long: 77.76, Depth: 23 Km ,Location: 66km NNE of Bengaluru, Karnataka, India for more information download the BhooKamp App https://t.co/iax6vbE3wO pic.twitter.com/irvoaQmaMF
— National Center for Seismology (@NCS_Earthquake) December 22, 2021Earthquake of Magnitude:3.3, Occurred on 22-12-2021, 07:14:32 IST, Lat: 13.55 & Long: 77.76, Depth: 23 Km ,Location: 66km NNE of Bengaluru, Karnataka, India for more information download the BhooKamp App https://t.co/iax6vbE3wO pic.twitter.com/irvoaQmaMF
— National Center for Seismology (@NCS_Earthquake) December 22, 2021
ಬೆಳಗ್ಗೆ ಸುಮಾರು 7 ಗಂಟೆ 9 ನಿಮಿಷ 36 ಸೆಕೆಂಡ್ಗೆ ಹಾಗೂ 7 ಗಂಟೆ 14 ನಿಮಿಷ 32 ಸೆಕೆಂಡ್ ಭೂಕಂಪನ ಸಂಭವಿಸಿದೆ ಎಂದು ಎನ್‌ಎಸ್‌ಸಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಉಡುಪಿಯಲ್ಲಿ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು, ಮೂವರ ಸ್ಥಿತಿ ಗಂಭೀರ