ಬಾಗೇಪಲ್ಲಿ: ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಚಿವ ಡಾ.ಸುಧಾಕರ್ ಭೇಟಿ ನೀಡಿ, ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳನ್ನು ಬಾಗೇಪಲ್ಲಿ ಆರೋಗ್ಯ ಅಧಿಕಾರಿಗಳಾದ ಡಾ.ಸತ್ಯನಾರಾಯಣ ರೆಡ್ಡಿ ಅವರಿಂದ ಮಾಹಿತಿಯನ್ನು ಪಡೆದು ಪರಿಶೀಲಿಸಲಾಯಿತು.
![Dr. Sudhakar visits Bagepalli Taluk Hospital](https://etvbharatimages.akamaized.net/etvbharat/prod-images/kn-ckb-02-minister-sudakar-visit-avb-kac10004_14052021204654_1405f_1621005414_584.jpg)
ಓದಿ: ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇಲ್ಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ: ಸುಧಾಕರ್
ಆಂಬ್ಯುಲೆನ್ಸ್ ಮತ್ತು ಬೆಡ್ ಲಭ್ಯತೆ, ಆಕ್ಸಿಜನ್ ಮತ್ತು ಔಷಧದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನಿಗಾವಹಿಸಲು ಸೂಚನೆ ನೀಡಲಾಯಿತು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಹೆಚ್ಚುವರಿ ಸಿಲಿಂಡರ್ಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಘಟಕ ಹಾಗೂ ಆಕ್ಸಿಜನ್ ಜನರೇಟರ್ಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ.
![Dr. Sudhakar visits Bagepalli Taluk Hospital](https://etvbharatimages.akamaized.net/etvbharat/prod-images/kn-ckb-02-minister-sudakar-visit-avb-kac10004_14052021204654_1405f_1621005414_451.jpg)
ಈ ದಿಸೆಯಲ್ಲಿ ಸಿಎಸ್ಆರ್ ಅನುದಾನದಲ್ಲಿ ಜಿಲ್ಲಾ ಕೇಂದ್ರಕ್ಕೆ ಅಗತ್ಯವಾದಷ್ಟು ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು. ಉಳಿದಂತೆ ಎಸಿಸಿ ಕಂಪನಿ ವತಿಯಿಂದ ಗೌರಿಬಿದನೂರಿನಲ್ಲಿ, ಟೈಟಾನ್ ಕಂಪನಿ ವತಿಯಿಂದ ಬಾಗೇಪಲ್ಲಿಯಲ್ಲಿ ಆಕ್ಸಿಜನ್ ಪ್ಲಾಂಟ್ಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಶಿಡ್ಲಘಟ್ಟದಲ್ಲೂ ಯಾವುದಾದರೊಂದು ಸಂಸ್ಥೆ ವತಿಯಿಂದ ಘಟಕ ಸ್ಥಾಪಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಆರ್.ಲತಾ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
![Dr. Sudhakar visits Bagepalli Taluk Hospital](https://etvbharatimages.akamaized.net/etvbharat/prod-images/kn-ckb-02-minister-sudakar-visit-avb-kac10004_14052021204654_1405f_1621005414_180.jpg)