ETV Bharat / state

ಶೆಟ್ಟರ್ ಪಕ್ಷ ಬಿಟ್ಟಿದ್ದು ದುರದೃಷ್ಟಕರ: ಡಾ.ಕೆ.ಸುಧಾಕರ್ - ETV Bharat kannada News

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದು ದುರದೃಷ್ಟಕರ ಎಂದು ಡಾ.ಕೆ.ಸುಧಾಕರ್​ ಹೇಳಿದರು.

Minister Dr. K. Sudhakar
ಸಚಿವ ಡಾ.ಕೆ.ಸುಧಾಕರ್
author img

By

Published : Apr 17, 2023, 6:32 PM IST

ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರದಲ್ಲಿಂದು ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದು ದುರದೃಷ್ಟಕರ ವಿಚಾರ. ಇದೊಂದು ರೀತಿ ರಾಜಕೀಯ ಆತ್ಮಹತ್ಯೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಆಶಯಗಳಿಗೆ ವಿರುದ್ಧವಾಗಿ ಗೆದ್ದಿದ್ದವರು. ಹೈಕಮಾಂಡ್ ಅವರಿಗೆ ಪಕ್ಷ ಹಾಗೂ ದೇಶ ಸೇವೆಗೆ ಅವಕಾಶ ನೀಡೋದಾಗಿ ಹೇಳಿತ್ತು. ಶಾಸಕರಾಗಿ‌ ಹಲವು ಬಾರಿ ಗೆದ್ದು ಸಚಿವರಾಗಿ, ಮುಖ್ಯಮಂತ್ರಿಗಳಾಗಿದ್ದರು. ಶಾಸಕರಿಂದ ಸಿಎಂವರೆಗೆ ಸಾಕಷ್ಟು ಹುದ್ದೆಗಳನ್ನು ಪಡೆದು ಪಕ್ಷ ಬಿಟ್ಟಿದ್ದು ಸರಿಯಲ್ಲ ಎಂದರು.

ನನ್ನ ಕ್ಷೇತ್ರದಲ್ಲಿ ಯಾರುೂ ಸಹ ನನಗೆ ಪೈಪೋಟಿ ಇಲ್ಲ. ಅತ್ಯಧಿಕ ಮತಗಳ ಅಂತರದಿಂದ ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲಲಿದ್ದೇನೆ. ಈಗಾಗಲೇ ಮೂರು ಚುನಾವಣೆಗಳನ್ನು‌ ಎದುರಿಸಿದ್ದು ಅತ್ಯಧಿಕ‌ ಮತಗಳನ್ನು‌ ಪಡೆದುಕೊಂಡು ಬಂದಿದ್ದೇನೆ. ಈ‌ ಬಾರಿಯೂ ಚುನಾವಣೆಯಲ್ಲಿ ಇನ್ನೂ‌ ಹೆಚ್ಚಿನ ಮತಗಳನ್ನು ಪಡೆದುಕೊಳ್ಳಲಿದ್ದೇನೆ ಎಂದು ವಿಶ್ವಾಸ‌ ವ್ಯಕ್ತಪಡಿಸಿದರು.

ಇದನ್ನೂ ಓದಿ : ಶೆಟ್ಟರ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.