ETV Bharat / state

'ಮೈತ್ರಿ'ಯಲ್ಲಿ ಅನುದಾನವೇ ಬಂದಿಲ್ಲ... ರಾಜೀನಾಮೆಗೆ ಕಾರಣ ನೀಡಿದ ಅನರ್ಹ ಶಾಸಕ ಸುಧಾಕರ್​ - ಮೂಲಭೂತ ಹಕ್ಕು

ಯಾವ ಅನುದಾನ ಇಲ್ಲದೆಯೇ ಪಕ್ಷದಿಂದ ಹೊರ ಬಂದಿದ್ದೇವೆ ಎಂದು ಅನರ್ಹ ಶಾಸಕ ಸುಧಾಕರ್ ರಾಜೀನಾಮೆಗೆ ಕಾರಣ ನೀಡಿದ್ದಾರೆ.

disqualify-lawmaker-sudhakar-talking-against-alliance-government
author img

By

Published : Sep 20, 2019, 4:25 AM IST

ಚಿಕ್ಕಬಳ್ಳಾಪುರ: ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊಡದ ಕಾರಣ ರಾಜೀನಾಮೆ ಕೊಟ್ಟಿದ್ದೇವೆ ಹೊರತು ಬೇರೆ ಉದ್ದೇಶದಿಂದಲ್ಲ. ಕಾಂಗ್ರೆಸ್​ಗೆ ತಮ್ಮನ್ನೇ ಅರ್ಪಿಸಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ದೆವು. ಆದರೆ, ಸಮ್ಮಿಶ್ರ ಸರ್ಕಾರ ರಚಿಸಿದ ಬಳಿಕ ನಮ್ಮಂತ ಪ್ರಾಮಾಣಿಕರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ಅನರ್ಹ ಶಾಸಕ ಸುಧಾಕರ್ ದೋಸ್ತಿ ನಾಯಕರ ಆಡಳಿತ ಬಗ್ಗೆ ಕಿಡಿಕಾರಿದ್ದಾರೆ.

ಇಲ್ಲಿನ ಮೇಗಾಡೈರಿ, ಕಲುಷಿತ ನೀರಿನ ಘಟಕ, ತ್ಯಾಜ್ಯ ವಿಲೇವಾರಿ ಘಟಕ ಪರಿಶೀಲಿಸಿ ಮಾತನಾಡಿದ ಅವರು. ಯಾವ ಅನುದಾನ ಇಲ್ಲದೆಯೇ ಪಕ್ಷದಿಂದ ಹೊರ ಬಂದಿದ್ದೇವೆ. ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಆಗಿತ್ತು, ಅದನ್ನು ಕನಕಪುರದತ್ತ ತೆಗೆದುಕೊಂಡು ಹೋದರು. ಅದು ದ್ವೇಷ ರಾಜಕಾರಣವಲ್ಲವೇ..? ಎಂದು ಪ್ರಶ್ನಿಸಿದರು.

ಅನರ್ಹ ಶಾಸಕ ಸುಧಾಕರ್​

ಈಗಾಗಲೇ ರಾಮನಗರ, ಮಂಡ್ಯದಲ್ಲಿ ಮೆಡಿಕಲ್ ಕಾಲೇಜುಗಳಿವೆ. ಈಗ ಕನಕಪುರಕ್ಕೆ ಯಾಕೆ ಬೇಕಿತ್ತು. ಮೂರು ವರ್ಷದಲ್ಲಾದ ಮೆಡಿಕಲ್ ಕಾಲೇಜ್​ ಅನ್ನು ವಾಪಸ್​ ಪಡೆದಿದ್ದಾರೆ. ಒಂದೇ ಬಾರಿಗೆ ಕನಕಪುರಕ್ಕೆ ₹450 ಕೋಟಿ ರೂ. ನೀಡುವ ಬದಲು ಅಲ್ಲಿ ₹250, ಇಲ್ಲಿ ₹250 ಕೋಟಿ ರೂ. ನೀಡಿ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಬಹುದಿತ್ತು. ಕೆಲವರಿಗೆ ಮಾತ್ರ ವಿಶೇಷ ಅನುದಾನ ಕೊಟ್ಟು ದ್ವೇಷ ರಾಜಕಾರಣ ಮಾಡಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಕಿಡಿಕಾರಿದರು.

ಸುಪ್ರೀಂಕೋರ್ಟ್​ ತೀರ್ಪಿನ ನಂತರ ಏನಾಗಲಿದೆ ಎಂದು ತಿಳಿಯಲಿದೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ. ಸದ್ಯ ಮೂಲಭೂತ ಹಕ್ಕುಗಳನ್ನು ಕಸಿಯುವದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ಅದನ್ನು ಮಾಜಿ‌ ಸ್ಪೀಕರ್​​ ಆರ್​.ರಮೇಶ್​ಕುಮಾರ್​ ಕದಿಯಲು ಯತ್ನಿಸಿದ್ದಾರೆ. ತೀರ್ಪಿನ ಬಳಿಕ ಅವರಿಗೂ ಗೊತ್ತಾಗಲಿದೆ ಎಂದರು.

ಇನ್ನೂ ಮಾಲಿನ್ಯ ನಿಯಂತ್ರಣ ಬಗ್ಗೆ ಹೇಳಿಕೆ ನೀಡಿದ ಸುಧಾಕರ್​, ಹೊಸ ಆಡಳಿತ ಪಕ್ಷ ತೆಗೆದುಕೊಳ್ಳುವ ನಿರ್ಧಾರದಲ್ಲಿ ನಾನು ಅಧ್ಯಕ್ಷ ಸ್ಥಾನ ಮುಂದುವರೆಯಬೇಕೋ ಬೇಡವೋ ಎನ್ನುವುದು ತಿಳಿಯಲಿದೆ ಎಂದರು.

Intro:ಸಮ್ಮಿಶ್ರ ಸರ್ಕಾರ ರಚನೆ ಮಾಡಿ ನಮ್ಮಂತ ಪ್ರಾಮಾಣಿಕರಿಗೆ ತೊಂದರೆ ಮಾಡಿದ್ದಾರೆಂದು ಅನರ್ಹ ಶಾಸಕ ಸುಧಾಕರ್ ಇಂದು ಮೇಗಾಡೈರಿ,ಕಲುಶಿತ ನೀರಿನ ಘಟಕ,ತ್ಯಾಜ್ಯ ವಿಲೆವಾರಿ ಘಟಕವನ್ನು ಪರೀಶಿಲನೆ ನಡೆಸಿದ ನಂತರ ದೋಸ್ತಿ ನಾಯಕರ ಆಡಳಿತ ಬಗ್ಗೆ ಕಿಡಿಕಾರಿದ್ದಾರೆ.Body:ಸಮ್ಮಿಶ್ರ ಸರ್ಕಾರ ಕೊಟ್ಟಿರುವ ಅನುದಾನ ತೆಗೆದುಕೊಂಡು ಹೊರಗೆ ಬಂದಿದ್ದೇನೆ ಎಂದು ವ್ಯಗ್ಯ ಮಾಡಿದ ಅನರ್ಹ ಶಾಸಕ ಸುಧಾಜರ್ ಬಹುಶಃ ಅನುಧಾನವೆಲ್ಲಾ ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ಕೊಟ್ಟಿದ್ದಾರೇನೋ ಎಂದು ವ್ಯಂಗ್ಯ ಮಾಡಿದರು.

ಯಾವ ಅನುಧಾನ ಇಲ್ಲದೇಯೇ ನಾವು ಹೊರಗೆ ಬಂದಿದ್ದೇವೆ. ಮೆಡಿಕಲ್ ಕಾಲೇಜು ನಮಗೆ ಆಗಿದ್ದು ಕನಕಪುರಕ್ಕೆ ಕರೆದುಕೊಂಡು ಹೋದರು.ಅದು ದ್ವೇಶದ ರಾಜಕಾರಣವಲ್ಲವೇ ರಾಮನಗರದಲ್ಲಿ ಒಂದು ಮಂಡ್ಯದಲ್ಲಿ ಒಂದು ಮೆಡಿಕಲ್ ಕಾಲೇಜು ಇದೆ.ಇನ್ನೊಂದು ಕನಕಪುರಕ್ಕೆ ಯಾಕೆ ಬೇಕಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಲ್ಲವೇ ಇಲ್ಲಿ ಇರುವವರು ಜನರಲ್ಲವೆ.ಮೂರು ವರ್ಷದಲ್ಲಿ ಆದ ಮೆಡಿಕಲ್ ಕಾಲೇಜನ್ನ ಯಾವ ರೀತಿ ವಾಪಸ್ಸು ತೆಗೆದುಕೊಂಡು ಹೋದರು.ಕನಕಪುರಕ್ಕೆ ೪೫೦ ಕೋಟಿ ಒಂದೇ ಭಾರಿ ಕೊಡುವ ಬದಲು.ಅಲ್ಲಿ ೩೫೦ ಇಲ್ಲಿ ೩೫೦ ಕೊಟ್ಟು ಕಾಮಗಾರಿ ಪ್ರರಂಭ ಮಾಡಬಹುದಿತ್ತು. ಕೆಲವರಿಗಾಗಿ ಮಾತ್ರ ವಿಶೇಷ ಅನುಧಾನ ಕೊಟ್ಟು ದ್ವೇಶ ರಾಜಕಾರಣ ಮಾಡಿದ್ದಾರೆಂದು ಸಮ್ಮಿಶ್ರ ಸರ್ಕಾರದ ಬಗ್ಗೆ ಕಿಡಿಕಾರಿದರು.

ಯಾವುದೇ ಅನುಧಾನ ಕೊಡದೇ ಇರುವುದರಿಂದ ನಾವು ರಾಜಿನಾಮೇ ಕೊಟ್ಟಿದ್ದೇವೆ.ಕಾಂಗ್ರೆಸ್ ಪಕ್ಷಕ್ಕೆ ತನು ಮನ ಧನ ಎಲ್ಲವನ್ನು ಅರ್ಪಿಸಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ದೆವು.ಆದರೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿ ನಮ್ಮಂತ ಪ್ರಾಮಾಣಿಕರಿಗೆ ತೊಂದರೆ ಮಾಡಿದ್ದಾರೆಂದು ತಿಳಿಸಿದರು.

ಇನ್ನೂ ಉಚ್ಚ ನ್ಯಾಯಲಯದ ತೀರ್ಪಿನ ನಂತರ ಏನಾಗಲಿದೆ ಎಂದು ತಿಳಿಯಲಿದೆ.ನ್ಯಾಯಲಯದ ತೀರ್ಪಿನ ಬಗ್ಗೆ ನನಗೆ ನಂಬಿಕೆ ಇದ್ದು ನ್ಯಾಯ ಸಿಗುವ ನಿರಿಕ್ಷೆ ಇದೆ.ಸದ್ಯ ಮೂಲಭೂತ ಹಕ್ಕುಗಳನ್ನು ಕಸಿಯುವದಕ್ಕೆ ಯಾರಿಂದಲೂ ಸಾಧ್ಯವಿಲ್ಲಾ,ಆದರೆ ಮಾಜಿ‌ಸ್ಪೀಕರ್ಗಳು ಕದಿಯಲು ಯತ್ನಿಸಿದ್ದಾರೆ ನ್ಯಾಯಲಯದ ತೀರ್ಪಿನ ಬಳಿಕ ಅವರಿಗೂ ಗೋತ್ತಾಗಲಿದೆ ಎಂದು ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದ್ರು.

ಇನ್ನೂ ಮಾಲಿನ್ಯ ನಿಯಂತ್ರಣ ಬಗ್ಗೆ ಹೇಳಿಕೆ ನೀಡಿದ ಕೆ ಸುಧಾಕರ್ ಸುಪ್ರೀಂ ಕೋರ್ಟ್ ಯಾವುದೇ ತೀರ್ಪನ್ನು ನೀಡಿದರು.ಈಗ ಹೊಸ ಆಡಳಿತ ಪಕ್ಷ ತಗೆದುಕೊಳ್ಳುವ ನಿರ್ಧಾರದಲ್ಲಿ ನಾನು ಅಧ್ಯಕ್ಷ ಸ್ಥಾನ ಮುಂದುವರೆಯಬೇಕೋ ಬೇಡವೋ ತಿಳಿಯಲಿದೆ ಎಂದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.