ಚಿಕ್ಕಬಳ್ಳಾಪುರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಮನೆಗೆ ನುಗ್ಗಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ಆಹಾರವನ್ನು ಹುಡುಕುತ್ತಾ ಒಂದು ವರ್ಷದ ಜಿಂಕೆಯೊಂದು ನಾಡಿಗೆ ಬಂದ ವೇಳೆ ನಾಯಿಗಳ ಗುಂಪೊಂದು ದಾಳಿ ನಡೆಸಿದೆ. ನಾಯಿಗಳ ದಾಳಿಯಿಂದ ಜಿಂಕೆ ತಪ್ಪಿಸಿಕೊಂಡು ಕೆ.ಕೆ.ಪೇಟೆ ನಗರದ ನಿವಾಸಿ ಪಾರ್ವತಮ್ಮ ಮನೆಗೆ ನುಗ್ಗಿ ಪ್ರಾಣವನ್ನು ರಕ್ಷಿಸಿಕೊಂಡಿದೆ.
ಜಿಂಕೆಯನ್ನು ಆರೈಕೆ ಮಾಡಿದ ಸ್ಥಳೀಯರು ಶಿಡ್ಲಘಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳು ಜಿಂಕೆಗೆ ಚಿಕಿತ್ಸೆ ನೀಡಿ ನಂತರ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.