ಚಿಕ್ಕಬಳ್ಳಾಪುರ: ಇಂದು ಜಿಲ್ಲೆಯಲ್ಲಿ 130 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಇನ್ನು 278 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 1,486 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ಚಿಕ್ಕಬಳ್ಳಾಪುರ 57, ಬಾಗೇಪಲ್ಲಿ 20, ಚಿಂತಾಮಣಿ 12, ಗೌರಿ ಬಿದನೂರು 19, ಗುಡಿಬಂಡೆ 19, ಶಿಡ್ಲಘಟ್ಟ 9 ಸೋಂಕಿತರು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,314 ಕ್ಕೆ ಏರಿಕೆಯಾಗಿದೆ.
ಇನ್ನು ಚಿಕ್ಕಬಳ್ಳಾಪುರ 101, ಬಾಗೇಪಲ್ಲಿ 24, ಚಿಂತಾಮಣಿ 44, ಗುಡಿಬಂಡೆ 8, ಶಿಡ್ಲಘಟ್ಟ 30 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಗುಣಮುಖಗೊಂಡವರ ಸಂಖ್ಯೆ 6,737ಕ್ಕೆ ಏರಿಕೆಯಾಗಿದೆ.