ETV Bharat / state

ಕೊರೊನಾ ಬಿಸಿ​: ಅದ್ಧೂರಿತನಕ್ಕೆ ಅಧಿಕಾರಿಗಳಿಂದ ಬ್ರೇಕ್​, ಸರಳವಾಗಿ ನಡೆದ ವಿವಾಹ​​​

ಶಿಡ್ಲಘಟ್ಟ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಯನ್ನು ಅಧಿಕಾರಿಗಳು ತಡೆ ಹಿಡಿದು, ಸರಳವಾಗಿ ಮದುವೆ ಆಗುವಂತೆ ನೋಡಿಕೊಂಡಿದ್ದಾರೆ.

wedding
ಮದುವೆ
author img

By

Published : Mar 19, 2020, 9:44 PM IST

ಚಿಕ್ಕಬಳ್ಳಾಪುರ: ಕೊರೊನಾ ಭೀತಿಯಿಂದ ಇಂದು ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಯನ್ನು ಅಧಿಕಾರಿಗಳು ತಡೆ ಹಿಡಿದ ಹಿನ್ನೆಲೆ ಸರಳವಾಗಿ ವಿವಾಹ ನೆರವೇರಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ‌ ನಡೆದಿದೆ.

ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಗೆ ಅಧಿಕಾರಿಗಳಿಂದ ಬ್ರೇಕ್

ಹೌದು, ಕೊರೊನಾ ಸೊಂಕು ಹರಡದಂತೆ ರಾಜ್ಯ ಸರ್ಕಾರ ಮದುವೆ, ಸಮಾರಂಭ ಮತ್ತಿತರೆ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದ್ದು, ಇಂದು ಶಿಡ್ಲಘಟ್ಟ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮದುವೆಯನ್ನು ಅಧಿಕಾರಿಗಳು ತಡೆ ಹಿಡಿದ ಹಿನ್ನೆಲೆ ದ್ವಿಮುಖ ಗಣಪತಿ ದೇವಾಲಯದ ಬಳಿ ಸರಳವಾಗಿ ಮದುವೆ ಮಾಡಲಾಯಿತು.

ನಗರದ ಗಂಗಾಧರ ಹಾಗೂ ಗುಡಿಬಂಡೆ ಪಟ್ಟಣದ ರಮ್ಯ ಎಂಬುವರ ಮದುವೆ ಶಿಡ್ಲಘಟ್ಟ ‌ನಗರದಲ್ಲಿ ನಡೆಯುವಂತೆ ನಿಶ್ಚಯಿಸಿದ್ದು, ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ತಾಲೂಕಿನ ಆರೋಗ್ಯ ಅಧಿಕಾರಿಗಳು ಕಾರ್ಯಕ್ರಮ ನಡೆಯದಂತೆ ಸೂಚನೆ ನೀಡಿದ್ದು, ನಂತರ ಸರಳ‌ ಮದುವೆಗೆ ಅನುವು ಮಾಡಿಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.