ಚಿಕ್ಕಬಳ್ಳಾಪುರ: ಪ್ರತಿಷ್ಠೆಯ ಕಣವಾದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಈ ಮೂಲಕ ನೂತನ ಸಚಿವ ಡಾ.ಕೆ. ಸುಧಾಕರ್ಗೆ ಮುಖಭಂಗ ಉಂಟಾಗಿದೆ.
ಕಳೆದ ಉಪಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಭಲ್ಯವನ್ನು ಕಳೆದಕೊಂಡು ಸೋಲಿನ ರುಚಿಯಲ್ಲಿದ ಕಾಂಗ್ರೆಸ್ ಪಕ್ಷಕ್ಕೆ ನಗರಸಭೆ ಚುನಾವಣೆ ನೆಮ್ಮದಿಯನ್ನು ನೀಡಿದೆ. 31 ವಾರ್ಡ್ಗಳಿಗೆ ಇದೇ ತಿಂಗಳ 9 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಗೆ 16 ಸ್ಥಾನ, ಸತತ ಹ್ಯಾಟ್ರಿಕ್ ಗೆಲುವಿನಲ್ಲಿದ್ದ ಶಾಸಕ ಹಾಗೂ ನೂತನ ಸಚಿವ ಸುಧಾಕರ್ 9 ಸ್ಥಾನಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಡು.
ಜೆಡಿಎಸ್ ಪಕ್ಷ ಕೇವಲ 2 ಸ್ಥಾನಗಳನ್ನು ಪಡೆದುಕೊಂಡು ಅಸ್ಥಿತ್ವವನ್ನು ಕಳೆದುಕೊಂಡಿದೆ. ಇನ್ನು ಸಚಿವರಾದ ಬಳಿಕ ಶಾಸಕರಿಗೆ ನಿರಾಸೆ ಮೂಡಿದರೂ ಬಿಜೆಪಿ ಶತಾಯಗತಾಯ ಅಧಿಕಾರ ಹಿಡಿಯಲಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಹೇಳಿಕೆಗಳು ಕೈನಾಯಕರ ಕಿವಿಗೆ ಬೀಳುತ್ತಿದಂತೆ ಗೆದ್ದ ಕೈ ನಾಯಕರನ್ನು ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.