ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ಸ್ಥಳ ಗೌರಿಬಿದನೂರಿನ ಅಲಕಾಪುರದಿಂದ ವಿಧುರಾಶ್ವತ್ಥದವರೆಗೂ ಬೃಹತ್ ಪಾದಯಾತ್ರೆ ನಡೆಸಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಶಕ್ತಿ ಪ್ರದರ್ಶಿಸಿದರು. ಈ ವೇಳೆ, ಮಾತನಾಡಿದ ಡಿಕೆಶಿ ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದ್ದು, ಈ ಬಾರಿ ಐದೂ ಕ್ಷೇತ್ರಗಳನ್ನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 'ಕರ್ನಾಟಕದ ಜಲಿಯನ್ ವಾಲಾಬಾಗ್ ಎನ್ನಿಸಿಕೊಂಡಿರುವ ವಿಧುರಾಶ್ವತ್ಥದಲ್ಲಿ 32 ಜನ ಸ್ವಾತಂತ್ರ್ಯ ಹೋರಾಟಗಾರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಿದ್ದಾರೆ'. ಬಿಜೆಪಿಯವರು, ಆರ್ಎಸ್ಎಸ್ ನವರು ಯಾರಾದರೂ ಈ ದೇಶಕ್ಕೆ ಪ್ರಾಣಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ನಲ್ಲಿ ರಾಜಕೀಯ ಪಕ್ಷ ಇರಲಿಲ್ಲ. ಹೆಡೆಗೆವಾರ್ ಎಂಬ ಡಾಕ್ಟರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇವರೆಲ್ಲ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಆರ್ಎಸ್ಎಸ್ ಸಂಘ ಪರಿವಾರದವರಿಗೆ ನಾಚಿಕೆ ಆಗಲ್ವಾ?, ಈ ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು?. ಇಂದು ನಾನು ಮುಖ್ಯಮಂತ್ರಿಯಾಗಿದ್ದು, ಮೋದಿ ಮುಖ್ಯಮಂತ್ರಿಯಾಗಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ.
ಹರ್ ಘರ್ ಗರ್ ತ್ರಿರಂಗಾ ಬಿಜೆಪಿಯವರ ಡ್ರಾಮಾ. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು. ಗೌರಿಬಿದನೂರಿನಲ್ಲಿ ಶಿವಶಂಕರರೆಡ್ಡಿ ಐದು ಬಾರಿ ಗೆದ್ದಿದ್ದಾರೆ. ಬೇರೆವರು ಚೀಲಗಳಲ್ಲಿ ದುಡ್ಡು ತಗೊಂಡು ಬರ್ತಾರೆ ಎಚ್ವರಿಕೆ ಇರಲಿ. ಕಾರ್ಯಕರ್ತ ಶಿವಶಂಕರರೆಡ್ಡಿ ಅವರ ಜೊತೆ ನಿಲ್ಲಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಹರ್ ಘರ್ ತಿರಂಗ ಕೇವಲ ನಾಟಕ, ಲೂಟಿಯೇ ಬಿಜೆಪಿ ಕೊಡುಗೆ: ಸಿದ್ದರಾಮಯ್ಯ