ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಸುಧಾಕರ್ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಡಾ.ಕೆ.ಸುಧಾಕರ್ ದಲಿತ ಕಾಂಗ್ರೆಸ್ ಮುಖಂಡನಿಗೆ ದೂರವಾಣಿ ಕರೆ ಮಾಡಿ 'ಕೈ ಕಾಲು ಮುರೀತೀನಿ..' ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನನಗೆ ಸುಧಾಕರ್ ಕರೆ ಮಾಡಿ, ಅವಾಜ್ ಹಾಕಿದ್ದಾರೆ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಾರೋಬಂಡೆ ಗ್ರಾಮಪಂಚಾಯತಿ ಅಧ್ಯಕ್ಷ ಮೂರ್ತಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಅನರ್ಹ ಶಾಸಕ ಸುಧಾಕರ್ ಹೇಳಿದ್ದೇನು..?
ಇನ್ನೂ ಧ್ವನಿಯ ಬಗ್ಗೆ ಈಟಿವಿ ಭಾರತಗೆ ಸ್ಪಷ್ಟಪಡಿಸಿದ ಅನರ್ಹ ಶಾಸಕ ಸುಧಾಕರ್, ಕೊನೆಯ ಸಂಭಾಷಣೆ ಮಾತ್ರ ನನ್ನದು. ಆದರೆ ಉಳಿದ ಧ್ವನಿಯೂ ನನ್ನದಲ್ಲಾ. ಬೇಕಾದರೆ ತನಿಖೆ ನಡೆಯಲೀ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಬಗ್ಗೆ ನೇರವಾಗಿ ಬೈಟ್ ನೀಡಲು ಅವರು ನಿರಾಕರಿಸಿದ್ದಾರೆ. ಕೇವಲ ನಮ್ಮ ರಿಪೋರ್ಟರ್ ಜತೆ ದೂರವಾಣಿ ಸಂಭಾಷಣೆ ನಡೆಸಿ ಈ ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಅಂತಹ ಭಾಷೆಯನ್ನು ಬಳಸುವುದಿಲ್ಲಾ. ಆದರೆ ಅವರು ಅಂತಹ ಆರೋಪಗಳನ್ನು ಸಾಕಷ್ಟು ಮಾಡಲಿದ್ದಾರೆಂದು ತಿಳಿದು ಬಂದಿದೆ. ಇತ್ತಿಚ್ಚೀನ ದಿನಗಳಲ್ಲಿ ರಾಜಕೀಯ ಹದಗೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದು ಅವರು ತಿಳಿಸಿದ್ದಾರೆ.