ETV Bharat / state

ಪಂಚರತ್ನ ರಥಯಾತ್ರೆ : ಹಣಕ್ಕಾಗಿ ಬಾಗೇಪಲ್ಲಿ ಜೆಡಿಎಸ್ ಕಚೇರಿ ಮುಂಭಾಗ ಗಲಾಟೆ ? - ಈಟಿವಿ ಭಾರತ ಕನ್ನಡ

ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿದ ಜನರಿಗೆ ಮತ್ತು ಜನರನ್ನು ಕರೆತರಲು ತಂದಿದ್ದ ವಾಹನಗಳಿಗೆ ಬಾಡಿಗೆ ನೀಡದ ಹಿನ್ನೆಲೆ ನೂರಕ್ಕೂ ಹೆಚ್ಚು ಜನರು ಬಾಗೇಪಲ್ಲಿ ಜೆಡಿಎಸ್​ ಕಚೇರಿಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ನಡೆದಿದೆ.

commotion-at-bagepalli-jds-office
ಪಂಚರತ್ನ ರಥಯಾತ್ರೆ : ಹಣಕ್ಕಾಗಿ ಬಾಗೇಪಲ್ಲಿ ಜೆಡಿಎಸ್ ಕಚೇರಿ ಮುಂಭಾಗ ಗಲಾಟೆ ?
author img

By

Published : Nov 26, 2022, 3:51 PM IST

ಚಿಕ್ಕಬಳ್ಳಾಪುರ : ಪಂಚರತ್ನ ಸಮಾವೇಶದಲ್ಲಿ ಭಾಗವಹಿಸಿದ್ದ ಜನರಿಗೆ, ಹಾಗೂ ಜನರನ್ನು ಕರೆ ತರಲು ಬಾಡಿಗೆಗೆ ತಂದಿದ್ದ ವಾಹನಕ್ಕೆ ಹಣ ನೀಡದ ಕಾರಣ ಬಾಗೇಪಲ್ಲಿ ಜೆಡಿಎಸ್ ತಾಲೂಕು ಕಚೇರಿಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ನಿನ್ನೆ ಜಿಲ್ಲೆಯಲ್ಲಿ ಪಂಚರತ್ನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಚೇಳೂರಿನಿಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆ ಬಾಗೇಪಲ್ಲಿ ನಗರವನ್ನು ಸುತ್ತಿಕೊಂಡು ಗುಡಿಬಂಡೆ ವ್ಯಾಪ್ತಿಯ ಬೀಚಗಾನಹಳ್ಳಿ ಗ್ರಾಮದಲ್ಲಿ ಸಮಾವೇಶ ಹಾಗೂ ಗ್ರಾಮ ವಾಸ್ತವ್ಯ ನಡೆದಿತ್ತು.

ಆದರೆ, ಕಾರ್ಯಕ್ರಮಕ್ಕೆ ಜನರನ್ನು ಕರೆತಂದಿದ್ದ ವಾಹನಗಳಿಗೆ ಬಾಡಿಗೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಜನರು ರಾತ್ರಿ ಪೇಮೆಂಟಿಗಾಗಿ ಜೆಡಿಎಸ್ ಕಚೇರಿ ಬಳಿ ಹೋಗಿದ್ದು, ಈ ವೇಳೆ ನೂರಕ್ಕೂ ಅಧಿಕ ಮಂದಿ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಬಸ್​ ಸೌಕರ್ಯ ಕಲ್ಪಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿಗೆ ಮಕ್ಕಳ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.