ETV Bharat / state

ಪೂಜಾರಿ ಆತನ ಶಿಷ್ಯ ಆತ್ಮಹತ್ಯೆಗೆ ಹೊಸ ಟ್ವಿಸ್ಟ್ : ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಪೂಜಾರಿ - ಚಿಂತಾಮಣಿಯಲ್ಲಿ ಪೂಜಾರಿ ಆತ್ಮಹತ್ಯೆ ಪ್ರಕರಣ

ಚಿಂತಾಮಣಿ ದೇವಸ್ಥಾನದ ಪೂಜಾರಿ ಹಾಗೂ ಅವರ ಶಿಷ್ಯ (priest and his disciple death) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಇಬ್ಬರೂ ಸಾವಿಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ತಿಳಿಸಿದ್ದಾರೆ..

updates
ಕೊಳಾಲಮ್ಮ ದೇವಿಯ ಆರಾಧಕ ಶ್ರೀಧರ್ ಆತ್ಮಹತ್ಯೆ
author img

By

Published : Nov 17, 2021, 4:34 PM IST

Updated : Nov 18, 2021, 9:13 AM IST

ಚಿಕ್ಕಬಳ್ಳಾಪುರ : ಕೊಳಾಲಮ್ಮನ ಪೂಜಾರಿ ಮತ್ತು ಶಿಷ್ಯನ ಸಾವಿನ ಪ್ರಕರಣಕ್ಕೆ (priest and his disciple death) ಹೊಸ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೂ (suicide)ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಪೂಜಾರಿ ಮತ್ತು ಶಿಷ್ಯ ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಹೇಳಿಕೊಂಡಿದ್ದಾರೆ.

ಪೂಜಾರಿ ಆತನ ಶಿಷ್ಯ ಆತ್ಮಹತ್ಯೆಗೆ ಹೊಸ ಟ್ವಿಸ್ಟ್

ಜಿಲ್ಲೆಯ ಚಿಂತಾಮಣಿ ತಾಲೂಕಿನ(Chintamani taluk) ಗುಟ್ಟಹಳ್ಳಿ ಕೊಳಾಲಮ್ಮ ದೇವಸ್ಥಾನದಲ್ಲಿ ದೇವಿಯ ಆರಾಧಕ ಶ್ರೀಧರ್ ಮತ್ತು ಶಿಷ್ಯ ಲಕ್ಷ್ಮೀಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸಾವಿನ ರಹಸ್ಯವನ್ನು ಭೇದಿಸುವಲ್ಲಿ ನಿರತರಾಗಿದ್ದರು.

ಆದರೆ, ಇಂದು ಮೃತ ಪೂಜಾರಿಯ ಸೆಲ್ಫಿ ವಿಡಿಯೋ(selfie video) ದೊರೆತಿದೆ. ನಮ್ಮ ಸಾವಿಗೆ ಯಾರೂ ಕಾರಣವಲ್ಲವೆಂದು ಶ್ರೀಧರ್(ಅಮ್ಮ) ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾರೆ. ತದ ನಂತರ ಗುರು ಸಾವನ್ನಪ್ಪಿದ್ದಕ್ಕೆ ಶಿಷ್ಯ ಲಕ್ಷ್ಮೀಪತಿ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿ ಅಮ್ಮನ ಪಕ್ಕದಲ್ಲಿಯೇ ನನ್ನನ್ನು ಹಾಕಿ ಎಂದು ಹೇಳಿಕೊಂಡಿದ್ದಾರೆ.

updates
ಕೊಳಾಲಮ್ಮ ದೇವಿಯ ಆರಾಧಕ ಶ್ರೀಧರ್ ಆತ್ಮಹತ್ಯೆ

ತನ್ನ ಶಿಷ್ಯ ಅನಿಲ್​​ನನ್ನು ಪ್ರೀತಿಸುತಿದ್ದ ಪೂಜಾರಿ ಶ್ರೀಧರ್​​ಗೆ ಅನಿಲ್​​ಗೆ ಮದುವೆ ಫಿಕ್ಸ್ ಆಗಿದ್ದು ಗೊತ್ತಾಗಿದೆ. ಆದ ಕಾರಣ ಜಿಗುಪ್ಸೆ ಹೊಂದಿದ್ದು, ತನ್ನ ಪ್ರಿಯಕರ‌ ಅನಿಲ್ ಸಿಗುವುದಿಲ್ಲ ಎಂದು ಬೇಸತ್ತು ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಚಿಂತಾಮಣಿಯಲ್ಲಿ ದೇವಸ್ಥಾನದ ಪೂಜಾರಿ, ಶಿಷ್ಯ ಆತ್ಮಹತ್ಯೆ?.. ಸಾವಿನ ಸುತ್ತ ಅನುಮಾನದ ಹುತ್ತ

ಪೂಜಾರಿ‌ ಆತ್ಮಹತ್ಯೆ ವಿಚಾರ ತಿಳಿದು ನಾಪತ್ತೆಯಾಗಿದ್ದ ಅನಿಲ್ ಸೆಲ್ಫಿ ವಿಡಿಯೋ ಮಾಡಿ ಆಪ್ತರಿಗೆ ಕಳುಹಿಸಿ ಪೂಜಾರಿ ಸಾವಿನ ರಹಸ್ಯದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಪೂಜಾರಿ ಹಾಗೂ ಆತನ ಶಿಷ್ಯನ ಸೆಲ್ಫಿ ವಿಡಿಯೋಗಳು ಈಟಿವಿ ಭಾರತ್‌ಗೆ ಲಭ್ಯವಾಗಿವೆ.

Last Updated : Nov 18, 2021, 9:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.