ETV Bharat / state

ಚಿಕ್ಕಬಳ್ಳಾಪುರದಲ್ಲಿ ಮೂವರ ಸಾವು ಪ್ರಕರಣ.. ನಮ್ಮ ಅಪ್ಪ, ಅಮ್ಮ, ಅಕ್ಕ ಎಂದು ಗುರುತಿಸಿದ ಸಹೋದರಿ - ವಿರೂಪಗೊಂಡಿದ್ದ ಮೂರು‌ ದೇಹಗಳು ಗುರುತು ಇಂದು ಪತ್ತೆ

ಚಿಕ್ಕಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ ಮೂವರು ಮೃತಪಟ್ಟಿದ್ದ ಪ್ರಕರಣ.. ಮೂವರ ಮೃತದೇಹಗಳ ಗುರುತು ಪತ್ತೆ.. ಅಪ್ಪ-ಅಮ್ಮ ಮತ್ತು ಅಕ್ಕಳ ಮೃತ ದೇಹಗಳೆಂದು ಪತ್ತೆ ಮಾಡಿದ ಸಹೋದರಿ..

Chikkaballapur three dead body found case  dead bodies identified by daughter  dead body found on railway track  ರೈಲಿಗೆ ಸಿಲುಕಿ ಮೂವರು ಸಾವು ಪ್ರಕರಣ  ಚಿಕ್ಕಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ ಮೂವರು ಮೃತ  ಮೂವರ ಮೃತದೇಹಗಳ ಗುರುತು ಪತ್ತೆ  ರೈಲ್ವೆ ಹಳಿಯ ಮೇಲೆ ಕೆಲ ದಿನಗಳ ಹಿಂದೆ ಮೂರು ದೇಹಗಳ ಪತ್ತೆ  ದೇಹಗಳು ಗುರುತು ಸಿಗದಂತೆ ವಿರೂಪ  ವಿರೂಪಗೊಂಡಿದ್ದ ಮೂರು‌ ದೇಹಗಳು ಗುರುತು ಇಂದು ಪತ್ತೆ
ಚಿಕ್ಕಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ ಮೂವರು ಸಾವು ಪ್ರಕರಣ
author img

By

Published : Jan 11, 2023, 3:49 PM IST

Updated : Jan 11, 2023, 4:22 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲೊಂದು ನೋವಿನ ಸಂಗತಿ ಹೊರ ಬಂದಿದೆ. ಗೌರಿಬಿದನೂರಿನ‌ ನೂತನ ತಾಲೂಕು ಮಂಚೇನಹಳ್ಳಿ‌ ತಾಲೂಕಿನ ತೊಂಡೆಭಾವಿ ಬಳಿ ರೈಲ್ವೆ ಹಳಿಯ ಮೇಲೆ ಕೆಲ ದಿನಗಳ ಹಿಂದೆ ಮೂರು ದೇಹಗಳ ಪತ್ತೆಯಾಗಿದ್ದವು. ಈ ದೇಹಗಳು ಗುರುತು ಸಿಗದಂತೆ ವಿರೂಪಗೊಂಡಿದ್ದವು. ಈಗ ಈ ಮೂರು ದೇಹಗಳ ಗುರುತು ಪತ್ತೆಯಾಗಿದ್ದು, ಇವರು ಒಂದೇ ಕುಟುಂಬದ ಮೂವರು ಎಂಬುದು ತಿಳಿದು ಬಂದಿದೆ.

ಗೌರಿಬಿದನೂರಿನ‌ ನೂತನ ತಾಲೂಕು ಮಂಚೇನಹಳ್ಳಿ‌ ತಾಲೂಕಿನ ತೊಂಡೆಭಾವಿ ಬಳಿಯ ರೈಲ್ವೆ ಹಳಿಯ ಮೇಲೆ ಸಿಕ್ಕಿದ್ದ ಮೂರು‌ ದೇಹಗಳ ಗುರುತು ಇಂದು ಪತ್ತೆಯಾಗಿದೆ‌ ತೊಂಡೆಭಾವಿ ಗ್ರಾಮದ ನಿವಾಸಿ ಮೈಲಾರಪ್ಪ (50), ಆತನ ಪತ್ನಿ ಪುಷ್ಪಲತಾ (45) ಮತ್ತು ಹಿರಿಯ ಮಗಳು ಮಮತಾ (25) ಮೃತರು ಎಂದು‌ ಗುರುತಿಸಲಾಗಿದೆ. ಕಳೆದ 4 ವರ್ಷಗಳ‌ ಹಿಂದೆ ಮೈಲಾರಪ್ಪ, ಪುಷ್ಪಲತಾ ದಂಪತಿ ಮಗಳು ಮಮತಾಳ ಮದುವೆ ಮಾಡಿದ್ದರು. ಮಮತಾ ಇತ್ತಿಚೇಗೆ ವೈಯಕ್ತಿಕ ಕಾರಣಗಳ ಹಿನ್ನೆಲೆ ಮತ್ತೆ ತವರು ಮನೆಗೆ ವಾಪಸ್ ಆಗಿದ್ದರು. ಇವರ ಮಧ್ಯೆ ಏನಾಯ್ತೋ ಏನೋ ಗೊತ್ತಿಲ್ಲ.. ಕಳೆದ ಮೂರು ದಿನಗಳಿಂದ ಇವರು ನಾಪತ್ತೆಯಾಗಿದ್ದರು.

ಇನ್ನು ಕೊನೆಯ ಮಗಳು ದಾಕ್ಷಾಯಣಿಗೂ ಸಹ ಮದುವೆಯಾಗಿದ್ದು, ಆಕೆ ಸದ್ಯ ಗಂಡನ‌ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಮೂರು ದಿನಗಳ‌ ಹಿಂದೆ ತಮ್ಮ‌ತಂದೆ - ತಾಯಿ ಮತ್ತು ಅಕ್ಕಳಿಗೆ ಕರೆ ಮಾಡಿದ ವೇಳೆ ಯಾರು ಕರೆ ಸ್ವೀಕರಿಸಿಲ್ಲ. ಹೀಗಾಗಿ ಗಾಬರಿಗೊಂಡ ದಾಕ್ಷಾಯಣಿ ಮನೆಗೆ ಬಂದು ಪರಿಶೀಲನೆ ನಡೆಸಿದ ವೇಳೆ ತಂದೆ - ತಾಯಿ‌ ಮತ್ತು ಅಕ್ಕ ಕಾಣದ ಸಂಬಂಧ ಆತಂಕಕ್ಕೀಡಾಗಿದ್ದರು. ಈ ಬಗ್ಗೆ ಮಂಚೇನಹಳ್ಳಿ ಪೊಲೀಸ್​ ಠಾಣೆಗೆ ದಾಕ್ಷಾಯಣಿ ದೂರು ನೀಡಲು ತೆರಳಿದ್ದರು. ಈ ವೇಳೆ, ಪೊಲೀಸರು ರೈಲ್ವೇ ಟ್ರಾಕ್​ನಲ್ಲಿ ಮೂರು ದೇಹಗಳ ಪತ್ತೆಯಾಗಿವೆ. ನೀವು ನೀಡಿರುವ ವಿವರಗಳು ಮತ್ತು ನಮಗೆ ದೊರೆತ ಮೃತದೇಹಗಳಿಗೆ ಹೊಲಿಕೆಯಾಗುತ್ತಿವೆ. ನೀಮೊಮ್ಮೆ ಮೃತದೇಹಗಳನ್ನು ಪರಿಶೀಲಿಸಿ ಎಂದು ಪೊಲೀಸರು ದಾಕ್ಷಾಯಣಿಗೆ ಸೂಚಿಸಿದ್ದರು.

ಪೊಲೀಸರು‌ ಮೃತ ದೇಹಗಳ ಬಗ್ಗೆ ಮಾಹಿತಿ ನೀಡಿದ ವೇಳೆ ಮೃತ ತಂದೆ ಮೈಲಾರಪ್ಪ, ತಾಯಿ ಪುಷ್ಪಲತಾ ಮತ್ತು ಅಕ್ಕ ಮಮತಾ ಎಂದು ದಾಕ್ಷಾಯಣಿ ಗುರುತು ಹಿಡಿದು ಖಚಿತ ಪಡಿಸಿದ್ದಾರೆ. ತಂದೆ - ತಾಯಿ ಮತ್ತು ಅಕ್ಕನ ದೇಹಗಳನ್ನು ನೋಡಿದ ದಾಕ್ಷಾಯಣಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ದಾಕ್ಷಾಯಣಿ ಕುಟುಂಬಕ್ಕೆ ಮೃತದೇಹಗಳನ್ನು ಹಸ್ತಾಂತರಿಸಿದರು. ದಾಕ್ಷಾಯಣಿ ಮತ್ತು ಸಂಬಂಧಿಕರು ಮೂವರ ಅಂತ್ಯಕ್ರಿಯೆ ನೇರವೇರಿಸಿದ್ದಾರೆ ಎಂಬುದು ತಿಳಿದುಬಂದಿದೆ. ಸದ್ಯ ಘಟನೆಗೆ ಮೂಲ‌ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗೆ ರೈಲ್ವೇ ಹಳಿಯ ಮೇಲೆ ಮೂರು ದೇಹಗಳು ಪತ್ತೆ: ತೊಂಡೆಭಾವಿ ರೈಲ್ವೆ ನಿಲ್ದಾಣ‌ದ ಸಮೀಪ‌ ಹಳಿ ಮೇಲೆ ವಿರೂಪಗೊಂಡಿದ್ದ ಮೂವರ ಮೃತದೇಹಗಳು ಪತ್ತೆಯಾಗಿದ್ದವು. ಅಂದಾಜು 45 ವರ್ಷದ ಪುರುಷ ವ್ಯಕ್ತಿ ಮತ್ತು ಅಂದಾಜು 35-25 ವರ್ಷದ ಇಬ್ಬರು ಮಹಿಳೆಯರ ಮೃತದೇಹಗಳೆಂದು ಪೊಲೀಸರು ಗುರುತಿಸಿದ್ದರು. ಆಗ ಮೃತದೇಹಗಳ ಬಗ್ಗೆ ಹೆಚ್ಚು ವಿವರ ದೊರೆತಿರಲಿಲ್ಲ. ಮೃತ ವ್ಯಕ್ತಿಯ ಶರ್ಟ್ ಮೇಲೆ ವಿನಾಯಕ ಟೈಲರ್ ಗೌರಿಬಿದನೂರು ಎಂಬ ಗುರುತಿತ್ತು. ಒಂದೇ ಕುಟುಂಬದ ಸದಸ್ಯರಾಗಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದರು. ಈಗ ಎರಡು ದಿನಗಳ ಬಳಿಕ ಮೃತದೇಹಗಳ ಗುರುತು ಪತ್ತೆಯಾಗಿದ್ದು, ಇವರು ಒಂದೇ ಕುಟುಂಬದ ಮೂವರು ಸದಸ್ಯರಾಗಿರುವುದು ಬೆಳಕಿಗೆ ಬಂದಿದೆ.

ಓದಿ: ರೈಲಿಗೆ ಸಿಲುಕಿ ದೇಹಗಳು ಛಿದ್ರ! ಒಂದೇ ಕುಟುಂಬದ ಮೂವರು ಆತ್ಮಹತ್ಯೆ?

Last Updated : Jan 11, 2023, 4:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.