ETV Bharat / state

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಪ್ಲಸ್ ಯಾರಿಗೆ ಮೈನಸ್!?

ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲೂ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎಲ್ಲಾ ಪಕ್ಷಗಳು ಮುಂದಾಗಿದ್ದು, ತೀವ್ರ ಪೈಪೋಟಿ ಇರುವ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಗೆ ಗಾಳ ಹಾಕುತ್ತಿವೆ. ಅಂತಹ ತೀವ್ರ ಕುತೂಹಲ ಸೃಷ್ಟಿಸಿರುವ ಲೋಕಸಭಾ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಕೂಡ ಒಂದು.

ಚಿಕ್ಕಬಳ್ಳಾಪುರ ಕ್ಷೇತ್ರ
author img

By

Published : Mar 17, 2019, 9:06 AM IST

ಬೆಂಗಳೂರು: 2019ರ ಲೋಕಸಭಾ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಏನಾದರೂ ಮಾಡಿ ಬಿಜೆಪಿ ಹಿಡಿತದಿಂದ ದೇಶದ ಆಡಳಿತವನ್ನು ಕಸಿದುಕೊಳ್ಳಬೇಕು ಎಂದು ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳು ಒಗ್ಗಟ್ಟಾಗಿ ಕಣಕ್ಕೆ ಇಳಿಯಲು ಮುಂದಾಗಿವೆ.

ಇಡೀ ದೇಶದಲ್ಲಿ ಹೇಗೆ ಬಿಜೆಪಿ ವಿರುದ್ದ ಪ್ರಾದೇಶಿಕ ಪಕ್ಷಗಳು ಸೇರಿದಂತೆ ರಾಷ್ಟ್ರೀಯ ಪಕ್ಷಗಳು ಬಲೆ ಹೆಣೆಯುತ್ತಿವೆಯೋ‌ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿವೆ. ಇದಕ್ಕೆ ಬಿಜೆಪಿ ಕೂಡ ಪ್ರತಿಯಾಗಿ ರಣತಂತ್ರ ಹೆಣೆಯುತ್ತಿದೆ.

ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲೂ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎಲ್ಲಾ ಪಕ್ಷಗಳು ಮುಂದಾಗಿದ್ದು, ತೀವ್ರ ಪೈಪೋಟಿ ಇರುವ ಕ್ಷೇತ್ರದಲ್ಲಿ ಗೆಲ್ಲುವ ಕುದುರೆಗೆ ಗಾಳ ಹಾಕುತ್ತಿವೆ. ಅಂತಹತೀವ್ರಕುತೂಹಲ ಸೃಷ್ಟಿಸಿರುವ ಲೋಕಸಭಾ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಕೂಡ ಒಂದು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಲೋಕಸಭಾ ಚುಣಾವಣಾ ಕಾವು ಜೋರಾಗಿದ್ದು, ಇದು ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಕದನವಾಗಿದೆ. ಈಗಾಗಲೇ ಮೈತ್ರಿ ಸರ್ಕಾರದ ನಿರ್ಧಾರದಂತೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲಿದ್ದು, ಬಿಜೆಪಿಯ ಬಚ್ಚೆಗೌಡರಿಗೆ ನೇರ ಸ್ಪರ್ಧೆ ಏರ್ಪಡಲಿದೆ.

ಚಿಕ್ಕಬಳ್ಳಾಪುರ ಕ್ಷೇತ್ರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 2014ರ ಚುನಾವಣೆಯನ್ನು ಒಮ್ಮೆ ನೋಡಿದ್ರೆ, ಕಾಂಗ್ರೆಸ್​ನ ವೀರಪ್ಪಮೊಯ್ಲಿ ತಮ್ಮ ಸಮೀಪದ ಸ್ಪರ್ಧಿ ಬಿಜೆಪಿಯ ಬಿ.ಎನ್.ಬಚ್ಚೇಗೌಡರನ್ನ ಪರಾಭವಗೊಳಿಸಿ 9,520 ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದ ಪರಾಜಿತರಾಗಿದ್ದ ಬಚ್ಚೇಗೌಡರೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ಹೀಗಾಗಿ ಈ ಬಾರಿಯೂ ಹಾಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ನಡುವೆ ನೇರ ಹಣಾಹಣಿ ನಡೆಯಲಿದೆ. ಕಳೆದ ಬಾರಿ 3,46,339 ಮತಗಳನ್ನ ಪಡೆದಿದ್ದ ಜೆಡಿಎಸ್ ಕೂಡ ಮೈತ್ರಿ ಧರ್ಮದ ಪ್ರಕಾರ ಕಾಂಗ್ರೆಸ್​ಗೆ ಸಪೋರ್ಟ್ ಮಾಡುತ್ತಿದ್ದು, ಇದರಿಂದ ಕಾಂಗ್ರೆಸ್​ಗೆ ಲಾಭವಾಗುತ್ತದೆ‌ ಅಂತ ಹೇಳಲಾದರೂ ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿರುವ ಭಿನ್ನಮತ ಸೋಲಿಗೆ ಕಾರಣವಾಗಬಹುದಾ ಎಂಬ ಅನುಮಾನವೂ ಇದೆ.

2014ರಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ನೋಡೋದಾದ್ರೆ:

  1. ಕಾಂಗ್ರೆಸ್:ಡಾ.ಎಂ.ವೀರಪ್ಪ ಮೊಯ್ಲಿ – 4,24,800
  2. ಬಿಜೆಪಿ:ಬಿ.ಎನ್.ಬಚ್ಚೇಗೌಡ-4,15,280
  3. ಜೆಡಿಎಸ್:ಹೆಚ್.ಡಿ.ಕುಮಾರಸ್ವಾಮಿ -3,46,339
  4. ಸಿಪಿಐಎಂ ಪಕ್ಷ – 26,671
  5. ಎಎಪಿ -6,182
  6. ನೋಟಾ – 7,682
  7. ಇತರೆ – 40,514
  8. ಒಟ್ಟು – 12,63,911 ಮತಗಳು. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಹಣಾಹಣಿ ನಡೆದಿರುವುದು ತಿಳಿಯಲಿದ್ದು, ಈ ಸಲವೂ ಅದೇ ಅಭ್ಯರ್ಥಿಗಳು ‌ಸ್ಪರ್ಧಿಸುತ್ತಿದ್ದು, ಪಕ್ಷದಷ್ಟೆ ಮೊಯ್ಲಿ‌ ಮತ್ತು ಬಚ್ಛೇಗೌಡರ ನಡುವೆ ಪ್ರತಿಷ್ಠೆಯ ಕಣವಾಗಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಗೆಲುವು!?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಎಂ.ವೀರಪ್ಪ ಮೊಯ್ಲಿಯವರಿಗೆ ಅಪಾರ ರಾಜಕೀಯ ಅನುಭವವಿದೆ. ಹಲವಾರು ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವ ಮೊಯ್ಲಿಗೆ ಈ ಬಾರಿ ಮೈತ್ರಿ ಬೆಂಬಲವೂ ದೊರೆತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಉಳಿದುಕೊಳ್ಳಲಿದೆ ಎಂಬ ನಿರೀಕ್ಷೆ ಇದ್ದರೂ, ಜೆಡಿಎಸ್​ನ ಮತದಾರರು ಮೊಯ್ಲಿಗೆ ಮತದಾನ ಮಾಡುತ್ತಾರೆ ಅಂತ ಹೇಳುವುದಕ್ಕೆ ಆಗಲ್ಲ.ಈಗಾಗಲೇ ಜೆಡಿಎಸ್​ನ ಮುಖಂಡರು ಮೊಯ್ಲಿ ವಿರುದ್ದ ಅಸಮಾಧಾನ ಹೊರಹಾಕಿದ್ದು, ಇದು ಕಾಂಗ್ರೆಸ್​ಗೆ ಮೈನಸ್ ಆಗಿ ಬಿಜೆಪಿಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚು.

ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ ಅವರಿಂದ ಕಡಿಮೆ ಮತಗಳ ಅಂತರದಿಂದ ಸೋಲುಂಡಿದ್ದ ಬಚ್ಚೇಗೌಡರೇ ಈ ಬಾರಿಯೂ ಬಿಜೆಪಿ ಕ್ಯಾಂಡಿಡೆಟ್.ಈಗಾಗಲೇ ಚುನಾವಣೆ ಸಮೀಪಿಸುತ್ತಿರೋದ್ರಿಂದ ಬಚ್ಚೇಗೌಡರು ಕ್ಷೇತ್ರದಾದ್ಯಂತ ಪಾದರಸದಂತೆ ಓಡಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ನಡೆಯುವ ಯಾವುದೇ ಚುನಾವಣೆಗಳಾಗಿರಲಿ ಅಲ್ಲಿ ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತೆ. ಅದರಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಹಿಂದಿನಂತೆ ಈ ಬಾರಿಯೂ ಆಡಳಿತ ವಿರೋಧಿ ಅಲೆ ಇದ್ದು, ಅದು ಬಚ್ಚೇಗೌಡರಿಗೆ ವರದಾನವಾಗಲಿದೆ. ಅಲ್ಲದೇ ಮೊಯ್ಲಿ ವಿರುದ್ದ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿರೋದು ಬಚ್ಚೆಗೌಡರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಅಲ್ಲದೇ ಇನ್ನು ಈ ಕ್ಷೇತ್ರದಲ್ಲಿ 2.10 ಲಕ್ಷ ಜನ ಒಕ್ಕಲಿಗ ಮತದಾರರಿದ್ದಾರೆ. ಮೂಲತ: ಬಚ್ಚೇಗೌಡರೂ ಒಕ್ಕಲಿಗರಾಗಿರೋದ್ರಿಂದ ಜಾತಿ ಲೆಕ್ಕಾಚಾರ ಇವರ ಕೈ ಹಿಡಿಯಲಿದೆ. ಅದರ ಜೊತೆಗೆ ಕ್ಷೇತ್ರದಾದ್ಯಂತ ಇರುವ ಮೋದಿ ಹವಾ ಕೂಡ ಬಚ್ಚೇಗೌಡರ ಗೆಲುವಿಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ.

ಕ್ಷೇತ್ರದ ಜಾತಿವಾರು ಮತದಾರರ ಸಂಖ್ಯೆ:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರು 2.80 ಲಕ್ಷ ಇದ್ದರೆ, ಬಲಜಿಗರು 2.10 ಲಕ್ಷ, ಕುರುಬರು ಮತ್ತು ನಾಯಕರು 3.20 ಲಕ್ಷ, ಹಿಂದುಳಿದ ವರ್ಗ/ ಪಂಗಡ 1.8 ಲಕ್ಷ, ಲಿಂಗಾಯತರು ಮತ್ತು ನೇಕಾರರು 1.6 ಲಕ್ಷ, ಗೊಲ್ಲರು 80 ಸಾವಿರ, ಬೋವಿಗಳು 70 ಸಾವಿರ, ಇತರೆ 2 ಲಕ್ಷ. ಈ ಕ್ಷೇತ್ರದಲ್ಲಿ ಜಾತಿವಾರು ಗಮನಿಸಿದ್ರೆ ಬಹು ಸಂಖ್ಯಾತರಾಗಿರುವ ಒಕ್ಕಲಿಗರು ಮತ್ತು ಬಲಜಿಗರ ಪಾತ್ರವೇ ಬಹುಮುಖ್ಯವಾಗಿದೆ. ಇಲ್ಲಿ ಅಭ್ಯರ್ಥಿ ಗೆಲುವು ಸಾಧಿಸಬೇಕಾದರೆ ಇವರಿಬ್ಬರ ಮತಗಳೇ ಮುಖ್ಯ.

ಕ್ಷೇತ್ರವಾರು ಮತದಾರರು:

  • ಗೌರಿಬಿದನೂರು ಕ್ಷೇತ್ರದಲ್ಲಿ 261 ಪೋಲಿಂಗ್ ಸ್ಟೇಷನ್​ಗಳಿದ್ದು,ಇಲ್ಲಿ ಪುರುಷರು 101006, ಮಹಿಳೆಯರು 101559 ಸೇರಿದಂತೆ ಒಟ್ಟು 202565‌ ಮತದಾರರಿದ್ದಾರೆ.
  • ಬಾಗೇಪಲ್ಲಿಯ 264 ಪೋಲಿಂಗ್ ಸ್ಟೇಷನ್​ಗಳಲ್ಲಿ ಪುರುಷರು 97871 , ಮಹಿಳೆಯರು 99145 ಒಟ್ಟು 197016‌ ಮತದಾರರಿದ್ದಾರೆ.
  • ಚಿಕ್ಕಬಳ್ಳಾಪುರದ 254 ಪೋಲಿಂಗ್ ಸ್ಟೇಷನ್​ಗಳಲ್ಲಿ ಪುರುಷರು 99202 , ಮಹಿಳೆಯರು 99895 , ಒಟ್ಟು 199097.
  • ಹೊಸಕೋಟೆ 286 ಪೋಲಿಂಗ್ ಸ್ಟೇಷನ್, ಪುರುಷರು 107729 , ಮಹಿಳೆಯರು 104708 , ಒಟ್ಟು 212437.
  • ದೇವನಹಳ್ಳಿ 292 ಪೋಲಿಂಗ್ ಸ್ಟೇಷನ್, ಪುರುಷರು 100522 , ಮಹಿಳೆಯರು 98724 , ಒಟ್ಟು 199306.
  • ದೊಡ್ಡಬಳ್ಳಾಪುರ 276 ಪೋಲಿಂಗ್ ಸ್ಟೇಷನ್, ಪುರುಷರು 100644 , ಮಹಿಳೆಯರು 99472 , ಒಟ್ಟು 200116.
  • ನೆಲಮಂಗಲ 276 ಪೋಲಿಂಗ್ ಸ್ಟೇಷನ್, ಪುರುಷರು 100872 , ಮಹಿಳೆಯರು 100171 , ಒಟ್ಟು 201043. ಹಾಗೂ
  • ಯಲಹಂಕ 376 ಪೋಲಿಂಗ್ ಸ್ಟೇಷನ್, ಪುರುಷರು 194641 , ಮಹಿಳೆಯರು 184187 , ಒಟ್ಟು 378828 ಮತದಾರರಿದ್ದಾರೆ.

ಒಟ್ಟಾರೆ 2284 ಪೊಲಿಂಗ್ ಸ್ಟೇಷನ್​ಗಳಿದ್ದು, ಪುರುಷರು 902487, ಮಹಿಳೆಯರು 887921 ಇದ್ದಾರೆ. ಇಲ್ಲಿ ಯಲಹಂಕ ಒಂದರಲ್ಲೇ ಹೆಚ್ಚು ಮತದಾರರಿದ್ದು, ಈ ಕ್ಷೇತ್ರ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

Intro:Body:

1 KN_BNG_02_Chikkaballapur conatency_pkg vis5.mp4  

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.