ಚಿಕ್ಕಬಳ್ಳಾಪುರ: ಕಳೆದ ಏಪ್ರಿಲ್ 30ರಂದು ನಡೆದ ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಬಾರ್ ಮಾಲೀಕ ಹಾಗೂ ನಗರಸಭೆ ಸದಸ್ಯ ಕೆ.ಆರ್. ದೀಪಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಏಪ್ರಿಲ್ 30ರಂದು ಕಳ್ಳತನ ನಡೆದಿತ್ತು. ಕಳ್ಳತನದ ದೂರು ದಾಖಲಿಸಿಕೊಂಡ ನಂದಿ ಗಿರಿಧಾಮ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಬಾರ್ ಮಾಲೀಕ ಹಾಗೂ 14 ವಾರ್ಡ್ನ ನಗರಸಭೆಯ ಸದಸ್ಯ ಕೆ. ಆರ್. ದೀಪಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾರ್ ಕಳ್ಳತನ ಬಗ್ಗೆ ತನಿಖೆ ಮಾಲೀಕ ದೀಪಕ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆರೋಪಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಲಾಕ್ಡೌನ್ ವೇಳೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಆಗುತ್ತಿರುವುದನ್ನು ನೋಡಿದ ಬಾರ್ ಮಾಲೀಕ, ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ತನ್ನ ಬಾರ್ನ ಹಿಂಭಾಗದ ಗೋಡೆ ಕೊರೆದು ಬಳಿಕ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸಿದ್ದಾನೆ.
ಸುಮಾರು 1 ಲಕ್ಷ ರೂ. ಮೌಲ್ಯದ ಮದ್ಯ ಹೊರಸಾಗಿಸಿ ಬಳಿಕ ಕಳ್ಳತನದ ಕಥೆ ಸೃಷ್ಟಿಸಿದ್ದಾನೆ. ಬಾರ್ ಮಾಲೀಕ ದೀಪಕ್ ಈ ಕೃತ್ಯಕ್ಕೆ ಪಾಲ್ಗೊಂಡಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಕ್ರೇಟ್ ಮದ್ಯ, ಒಂದು ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.