ETV Bharat / state

ಚಿಂತಾಮಣಿಯಲ್ಲಿ ಕರ್ತವ್ಯನಿಷ್ಠೆ ತೋರಿದ ಅಧಿಕಾರಿಗಳಿಗೆ ಸನ್ಮಾನ

ಉತ್ತಮ ಕೆಲಸ ನಿರ್ವಹಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ ಇಬ್ಬರು ಅಧಿಕಾರಿಗಳನ್ನು ಚಿಂತಾಮಣಿಯಲ್ಲಿ ಕರ್ನಾಟಕ ಪ್ರಜಾ ರಾಜ್ಯ ವೇದಿಕೆಯಿಂದ ಸನ್ಮಾನಿಸಲಾಯಿತು.

ಕರ್ತವ್ಯ ನಿಷ್ಠೆ ತೋರಿದ ಅಧಿಕಾರಿಗಳಿಗೆ ಸನ್ಮಾನ
author img

By

Published : Jul 21, 2019, 12:00 PM IST

ಚಿಕ್ಕಬಳ್ಳಾಪುರ: ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ವಿಶ್ವಾಸಕ್ಕೆ ಪಾತ್ರರಾದ ತಾಲೂಕು ದಂಡಾಧಿಕಾರಿ ಹಾಗೂ ಉಪ ತಹಶಿಲ್ದಾರ್ ಅವರನ್ನು ಕರ್ನಾಟಕ ಪ್ರಜಾ ರಾಜ್ಯ ವೇದಿಕೆಯಿಂದ ಸನ್ಮಾನಿಸಲಾಯಿತು.

ಚಿಂತಾಮಣಿ ತಾಲೂಕಿನ ದಂಡಾಧಿಕಾರಿ ಎಸ್.ಎಲ್. ವಿಶ್ವನಾಥ್ ಹಾಗೂ ಉಪ ತಹಶಿಲ್ದಾರ್ ಮೋಹನ್ ಅವರನ್ನು ವೇದಿಕೆ ಕಾರ್ಯಕರ್ತರು ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಜಾರಾಜ್ಯ ವೇದಿಕೆಯ ಜಿಲ್ಲಾಧ್ಯಕ್ಷ ರಂಜಾನ್ ಮಾತನಾಡಿ, ತಾಲೂಕಿನಲ್ಲಿ ದಂಡಾಧಿಕಾರಿಗಳು ಮತ್ತು ಉಪ ತಹಶಿಲ್ದಾರ್ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿಗಳನ್ನು ಹತ್ತೇ ದಿನಗಳಲ್ಲಿ ನೀಡಿ ಜಿಲ್ಲೆಗೆ ಮಾದರಿ ಎನಿಸಿಕೊಂಡಿದ್ದಾರೆ. ಇಂತಹ ಅಧಿಕಾರಿಗಳ ಅವಶ್ಯಕತೆ ಬಹಳ ಮುಖ್ಯ ಎಂದರು.

ಕರ್ತವ್ಯನಿಷ್ಠೆ ತೋರಿದ ಅಧಿಕಾರಿಗಳಿಗೆ ಸನ್ಮಾನ

ಸಂಘಟನೆಯ ತಾಲೂಕು ಅಧ್ಯಕ್ಷ ಜಿಯಾವುಲ್ಲಾ, ನಗರ ಅಧ್ಯಕ್ಷ ರಿಯಾಜ್ ಪಾಷಾ, ಉಪಾಧ್ಯಕ್ಷ ಮೋಹನ್ ರೆಡ್ಡಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಜಾವಿದ್ ಪಾಷಾ, ಕಾರ್ಯದರ್ಶಿ ಇನಾಯತುಲ್ಲಾ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Intro:ಕರ್ನಾಟಕ ಪ್ರಜಾ ರಾಜ್ಯ ವೇದಿಕೆ ವತಿಯಿಂದ ಚಿಂತಾಮಣಿ ತಾಲ್ಲೂಕು ದಂಡಾಧಿಕಾರಿಗಳಾದ ಎಸ್ .ಎಲ್. ವಿಶ್ವನಾಥ್ ಹಾಗೂ ಉಪ ತಹಸೀಲ್ದಾರ್ ಮೋಹನ್ ಅವರನ್ನು ಮೈಸೂರು ಪೇಟಾ ಧರಿಸಿ ಶಾಲು ಒದಗಿಸಿ ಸನ್ಮಾನಿಸಲಾಯಿತು .Body:ನಂತರ ಮಾತನಾಡಿದ ಕರ್ನಾಟಕ ಪ್ರಜಾರಾಜ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ರಂಜಾನ್ ತಾಲ್ಲೂಕಿನಲ್ಲಿ ದಂಡಾಧಿಕಾರಿಗಳು ಮತ್ತು ಉಪ ತಹಸೀಲ್ದಾರ್ ಮೋಹನ್ ಅವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ . ಕಳೆದ ಕೆಲ ದಿನಗಳ ಹಿಂದೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರತಿಗಳನ್ನು ಹತ್ತೇ ದಿನದಲ್ಲಿ ನೀಡಿ ಜಿಲ್ಲೆಗೆ ಮಾದರಿ ಎನಿಸಿಕೊಂಡಿದ್ದಾರೆ. ಇಂತಹ ಅಧಿಕಾರಿಗಳ ಅವಶ್ಯಕತೆ ಈ ತಾಲ್ಲೂಕಿಗೆ ಬಹಳ ಮುಖ್ಯ ಎಂದರು .

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಜಿಯಾವುಲ್ಲಾ. ನಗರ ಅಧ್ಯಕ್ಷರಾದ ರಿಯಾಜ್ ಪಾಷಾ ಉಪಾಧ್ಯಕ್ಷರಾದ ಮೋಹನ್ ರೆಡ್ಡಿ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಜಾವಿದ್ ಪಾಷಾ ಕಾರ್ಯದರ್ಶಿ ಇನಾಯತುಲ್ಲಾ ಬಾಳು. ಬಾಬಾ ಫಕ್ರುದ್ದೀನ್ .ಅಮ್ಜದ್. ಆಸೀಫ್. ಮೌಲಾ ಅಲಿ. ದಸ್ತಗೀರ್. ಗಂಗಾಧರ .ಯಾರಬ. ಮುಬಾರಕ್. ಸಂಜು. ನವಾಜ್ . ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರೂ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.