ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಕಾರು ರೈಲ್ವೆ ಅಂಡರ್ ಪಾಸ್ ಪ್ರವೇಶಿಸುತ್ತಿದ್ದಂತೆ ಇದ್ದಕ್ಕಿದಂತೆ ಹೊತ್ತಿ ಉರಿದ ಘಟನೆ ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆ ಬಳಿ ಇರುವ ರೈಲ್ವೆ ಬ್ರಿಡ್ಜ್ ಕೆಳಗೆ ನಡೆದಿದೆ. ಸಂತೋಷ್ ನಗರ ನಿವಾಸಿ ಮಜೀದ್ ಎಂಬುವರಿಗೆ ಸೇರಿದ ಕಾರು ಸುಟ್ಟು ಕರಕಲಾಗಿದೆ.
ಮುರಗಮಲ್ಲದ ದರ್ಗಾಕ್ಕೆ ಹೋಗಿ ಶಿಡ್ಲಘಟ್ಟ ನಗರದ ಮೂಲಕ ಸಂತೋಷ್ ನಗರಕ್ಕೆ ಹೋಗುತ್ತಿದ್ದ ವೇಳೆ ಕಳೆದ ರಾತ್ರಿ(ಶುಕ್ರವಾರ) ನಗರದ ರೈಲ್ವೆ ಅಂಡರ್ ಪಾಸ್ ಬಳಿ KA40 NF 7652 ಮಾರುತಿ 800 ಕಾರು ಧಗಧಗನೆ ಹೊತ್ತಿ ಉರಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲ್ವೆ ಅಂಡರ್ ಪಾಸ್ ರಸ್ತೆ ನಗರದ ಮುಖ್ಯ ರಸ್ತೆಯಾಗಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಆಗಿ, ಸಂಚಾರ ಅಸ್ತವ್ಯಸ್ತವಾಗಿತ್ತು. ಕಾರು ಹೊತ್ತಿ ಉರಿಯುತ್ತಿದ್ದಂತೆ ಶಿಡ್ಲಘಟ್ಟದ ನೂರಾರು ಜನ ಜಮಾವಣೆಗೊಂಡಿದ್ದರು. ಸದ್ಯ ಬೆಂಕಿಯ ಕೆನ್ನಾಲಿಗೆ ಇಡೀ ಕಾರಿಗೆ ವ್ಯಾಪಿಸಿ ಸುಟ್ಟು ಕರಕಲಾಗಿದೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ನ್ಯಾ.ಬಿ.ವೀರಪ್ಪ ಜಿಲ್ಲಾಸ್ಪತ್ರೆ ಪರಿಶೀಲನೆ.. 94 ವರ್ಷದ ವೃದ್ಧೆಯ ಕಾಲು ಮುಟ್ಟಿ ನಮಸ್ಕಾರ