ETV Bharat / state

ಚಿಕ್ಕಬಳ್ಳಾಪುರ: ಸ್ಟುಡಿಯೋ ಬೀಗ ಒಡೆದು ಕ್ಯಾಮೆರಾ ಕಳ್ಳತನ.. - ಚಿಕ್ಕಬಳ್ಳಾಪುರದಲ್ಲಿ ಸ್ಟುಡಿಯೋ ಬೀಗ ಹೊಡೆದು ಕ್ಯಾಮೆರಾ ಕಳ್ಳತನ

2ನೇ ಬಾರಿಗೆ ನನ್ನ ಸ್ಟುಡಿಯೋದಲ್ಲಿ ಕಳ್ಳತನವಾಗಿದೆ. ಸೂಕ್ತ ತನಿಖೆ ನಡೆಸಿ ಕಳ್ಳರನ್ನ ಹಿಡಿಯುವಂತೆ ಸ್ಟುಡಿಯೋ ಮಾಲೀಕ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Camera theft at Chikkaballapur
ಸ್ಟುಡಿಯೋ ಬೀಗ ಹೊಡೆದು ಕ್ಯಾಮೆರಾ ಕಳ್ಳತನ
author img

By

Published : Feb 18, 2020, 7:07 PM IST

ಚಿಕ್ಕಬಳ್ಳಾಪುರ: ಫೋಟೋ ಸ್ಟುಡಿಯೋ ಬಾಗಿಲು ಒಡೆದು ಕಳ್ಳತನ ಮಾಡಿರೋ ಘಟನೆ ನಗರ ಬಿಬಿ ರಸ್ತೆಯ ಪ್ರೀತಿ ಫೋಟೋ ಸ್ಟುಡಿಯೋದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಕೈಚಳಕ ತೋರಿಸಿರೋ ಕಳ್ಳರು ಸ್ಟುಡಿಯೋದ ರಾತ್ರಿ ಕಾವಲುಗಾರ ವೃದ್ಧನನ್ನು ಕಳ್ಳರು ಬೆದರಿಸಿ ಅಲ್ಲಿಂದ ಓಡಿಸಿ ನಂತರ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಸ್ಟುಡಿಯೋದಲ್ಲಿದ್ದ 3 ಲಕ್ಷಕ್ಕೂ ಹೆಚ್ಚು ಮೌಲ್ಯದ 4 ಸ್ಟಿಲ್ ಕ್ಯಾಮೆರಾ, ಎರಡು ವಿಡಿಯೋ ಕ್ಯಾಮೆರಾ, ಒಂದು ಹಾರ್ಡ್ ಡಿಸ್ಕ್ ಸೇರಿ ಇತರ ಬೆಲೆಬಾಳುವ ವಸ್ತುಗಳನ್ನ ದೋಚಿ ಪರಾರಿಯಾಗಿದ್ದಾರೆ. ಕಳ್ಳರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಟುಡಿಯೋ ಬೀಗ ಒಡೆದು ಕ್ಯಾಮೆರಾ ಕಳ್ಳತನ..

ಇದು 2ನೇ ಬಾರಿಗೆ ನನ್ನ ಸ್ಟುಡಿಯೋದಲ್ಲಿ ಕಳ್ಳತನವಾಗಿದೆ. ಸೂಕ್ತ ತನಿಖೆ ನಡೆಸಿ ಕಳ್ಳರನ್ನ ಹಿಡಿಯುವಂತೆ ಸ್ಟುಡಿಯೋ ಮಾಲೀಕ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.