ಚಿಕ್ಕಬಳ್ಳಾಪುರ : ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಸಚಿವ ಸಿ.ಟಿ. ರವಿ ಭವಿಷ್ಯ ನುಡಿದಿದ್ದಾರೆ.
ನಗರದ ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಿದ್ದು, ಕಾರ್ಯಕ್ರಮಕ್ಕೆ ಈಶ್ವರಪ್ಪ, ಸಿ.ಟಿ ರವಿ, ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಮುಖಂಡರು ಆಗಮಿಸಿ, ಸುಧಾಕರ್ ಗೆಲುವಿಗಾಗಿ ಕ್ಷೇತ್ರದ ಜನ ಶ್ರಮವಹಿಸಬೇಕೆಂದು ಮನವಿ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಸಚಿವ ಸಿ.ಟಿ ರವಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನೀಲಗಿರಿ ಮರಗಳಿದ್ದಂತೆ. ಅವರು ಯಾರನ್ನು ಬೆಳೆಯಲು ಬಿಡುವುದಿಲ್ಲ , ಹಣ್ಣು ಬಿಡುವುದಿಲ್ಲ, ಹುಲ್ಲು ಬೆಳೆಯಲು ಬಿಡುವುದಿಲ್ಲ, ಎಲ್ಲರನ್ನು ತುಳಿಯುತ್ತಾರೆ. ಆದರೆ ಬಿಜೆಪಿ ಆಲದಮರ, ಮಾವಿನ ಮರ ಇದ್ದ ಹಾಗೆ. ಹಣ್ಣು ಕೊಟ್ಟು ಬೇರೆಯವರನ್ನು ಬೆಳೆಸುತ್ತದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.