ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ 15 ಸಾವಿರಕ್ಕಿಂತಲೂ ಅಧಿಕ ಭೋವಿ ಸಮಾಜದ ಮತದಾರರು, ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಮತ ನೀಡುವುದಾಗಿ ಹೇಳಿದ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಈ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರು.
ಕ್ಷೇತ್ರದಲ್ಲಿ ಈಗಾಗಲೇ ಸುಧಾಕರ್‌ಗೆ ಜನತೆಯ ಬೆಂಬಲವಿದೆ. ಕ್ಷೇತ್ರದಲ್ಲಿ ಸುಮಾರು 15 ಸಾವಿರದಿಂದ 18 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಬೆಂಬಲಿಸುವುದಾಗಿ ತಿಳಿಸಿದರು.
ಇನ್ನೂ ಯಾರೇ ರಾಜಕೀಯ ಪಕ್ಷ ಮುಖಂಡರು ಬಂದರೂ, ಸುಧಾಕರ್ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಇಟ್ಟುಕೊಂಡಿದ್ದಾರೆ. ಸುಮಾರು 45 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಲಿದ್ದಾರೆಂದು ತಿಳಿಸಿದರು. ಅದೇ ರೀತಿ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಹೇಳಿಕೆಗಳು ಸರ್ವೇ ಸಾಮಾನ್ಯ ಎಂದು ಸುಧಾಕರ್ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು.