ಬಾಗೇಪಲ್ಲಿ: ಬರುವ ಮೂರು ವರ್ಷದೊಳಗೆ ಕ್ಷೇತ್ರದ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ಮಾಡಿಕೊಡಲಾಗುವುದು ಎಂದು ಶಾಸಕ ಎಸ್. ಎನ್ ಸುಬ್ಬಾರೆಡ್ಡಿ ತಿಳಿಸಿದರು.
ಗೂಳೂರು ಹೋಬಳಿ ತಿಮ್ಮಂಪಲ್ಲಿ ಗ್ರಾಮ ಪಂಚಾಯತ್ ವತಿಯಿಂದ ತಿಮ್ಮಂಪಲ್ಲಿ, ಗೆಂಗಿರೆಡ್ಡಿಪಲ್ಲಿ, ಮೊದ್ದಕವಾರಿಪಲ್ಲಿಯಲ್ಲಿ ನಡೆದ ಆಶ್ರಯ ಯೋಜನೆಯಡಿ ನಿವೇಶನಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ಬಾರೆಡ್ಡಿ, ಯಾರಿಗೆ ನಿವೇಶನ ಇಲ್ಲವೋ ಅಂತವರಿಗೆ ಮಾತ್ರ ನೀಡಿ. ಕೆಲ ಗ್ರಾಮಗಳಲ್ಲಿ ಮುಖಂಡರಿಗೆ, ಬೇಕಾದವರಿಗೆ ಮಾತ್ರ ನೀಡಲಾಗುತ್ತಿದೆ. ಪ್ರತೀ ಗ್ರಾಮ.ಪಂಚಾಯತಿಗಳ ಪಿ.ಡಿ.ಓ ಅಧಿಕಾರಿಗಳು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು, ಒಂದು ವೇಳೆ ಅಕ್ರಮ ನಡೆದರೆ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಒಟ್ಟು 38 ಫಲಾನುಭವಿಗಳಿಗೆ ನಿವೇಶನ ಮಂಜೂರಾಗಿದ್ದು, 21 ಪಲಾನುಭವಿಗಳಿಗೆ ನೀಡಿದ್ದರು. ಉಳಿದವರಿಗೆ ಹಕ್ಕುಪತ್ರ ಬಂದನಂತರ ನೀಡಲಾಗುವುದು ಎಂದು ತಿಳಿಸಿದರು.