ETV Bharat / state

ದಾರಿ ಬಿಡುವ ವಿಚಾರಕ್ಕೆ ಕಿತ್ತಾಟ: ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ

ಗೌರಿಬಿದನೂರು ತಾಲ್ಲೂಕಿನ ಬಿಸಿಲಹಳ್ಳಿಯಲ್ಲಿ ದಾರಿ ಬಿಡುವ ವಿಚಾರವಾಗಿ ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ ನಡೆಸಲಾಗಿದೆ

ಗೌರಿಬಿದನೂರಿನಲ್ಲಿ ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ
author img

By

Published : Mar 5, 2019, 10:33 PM IST

Updated : Mar 5, 2019, 11:24 PM IST

ಚಿಕ್ಕಬಳ್ಳಾಪುರ: ದಾರಿ ಬಿಡುವ ವಿಚಾರದಲ್ಲಿ ಗಲಾಟೆ ನಡೆದು ಉದ್ರಿಕ್ತರು ಕೆಎಸ್ಆರ್​ಟಿಸಿ ಬಸ್​ ಚಾಲಕ ಮತ್ತು ನಿರ್ವಾಹಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಬಿಸಿಲಹಳ್ಳಿ ಬಳಿ ನಡೆದಿದೆ.

ಗೌರಿಬಿದನೂರಿನಲ್ಲಿ ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ

ಘಟನೆಯಲ್ಲಿ ಬಸ್ ಚಾಲಕ ಅಶ್ವತ್ಥರೆಡ್ಡಿ(28), ನಿರ್ವಾಹಕ ಮಂಜುನಾಥ್ (29) ಹಾಗೂ ನಾಗೇಶ್ (26) ಎಂಬುವರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಸ್ಥಳೀಯರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಆನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

undefined

ಏನಾಯ್ತು?

ಚಿಕ್ಕಬಳ್ಳಾಪುರ ಕಡೆಯಿಂದ ಕೆಎಸ್ಆರ್​ಟಿಸಿ ಬಸ್​ಗೆ ಗೌರಿಬಿದನೂರು ಕಡೆಯಿಂದ AP03S7273 ಹಾಗೂ AP27AN1026 ನಂಬರಿನ ಇಂಡಿಕಾ ಕಾರ್​ಗಳು ಎದುರಾಗಿವೆ. ಸೇತುವೆ ಕಿರಿದಾಗಿದ್ದ ಕಾರಣ ದಾರಿ ಬಿಡುವ ವಿಚಾರದಲ್ಲಿ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿ ಕಾರಿನಲ್ಲಿದ್ದವರು ಕೆಎಸ್ಆರ್​ಟಿಸಿ ಬಸ್​ ಚಾಲಕನನ್ನು ಬಸ್ಸಿನಿಂದ ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಾಲಕನ ರಕ್ಷಣೆಗೆ ಬಂದ ಕಂಡಕ್ಟರ್​ ಸೇರಿ ಮತ್ತೆ ಕೆಲವರ ಮೇಲೂ ರಕ್ತ ಬರುವಂತೆ ಹಲ್ಲೆ ನಡೆಸಿದರು ಎಂದು ತಿಳಿದುಬಂದಿದೆ.

ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಮಂಚೇನಹಳ್ಳಿ ಪಿಎಸ್​ಐ ಭಾಸ್ಕರ್ ಮತ್ತು ಸಿಬ್ಬಂದಿ, ಆರೋಪಿಗಳಾದ ಇನಾಯತ್ ,ಸಲ್ಮಾನ್, ಇಮ್ರಾನ್, ಉಮರ್ ಎಂಬುವವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂದ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ಬಿಸಿಲಹಳ್ಳಿ ಬಳಿ ಕೆಎಸ್ ಆರ್ ಟಿಸಿ ಬಸ್ಸಿನ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬಸ್ಸಿನ ಚಾಲಕ ಅಶ್ವತ್ಥರೆಡ್ಡಿ(28),ನಿರ್ವಾಹಕ ಮಂಜುನಾಥ್ (29),ನಾಗೇಶ್ (26) ಹಲ್ಲೆಗೊಳಗಾಗಿರುವ ವ್ಯಕ್ತಿಗಳಾಗಿದ್ದು,ಸ್ಥಳಿಯರು ತಕ್ಷಣ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ  ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ.

ಘಟನೆ ಹಿನ್ನೆಲೆ :

ಚಿಕ್ಕಬಳ್ಳಾಪುರ ಕಡೆಯಿಂದ ಕೆಎಸ್ ಆರ್ ಟಿಸಿ ಬಸ್ಸು ಹಾಗೂ ಗೌರಿಬಿದನೂರು ಕಡೆಯಿಂದ  AP03S7273  ಹಾಗೂ AP27AN1026 ಇಂಡಿಕಾ ಕಾರಿನಲ್ಲಿ ಬರುತ್ತಿದ್ದು ಕಿರಿದಾದ ಸೇತುವೆ ಬಳಿ ಎರಡು ವಾಹನಗಳು ಮುಖಾಮುಖಿಯಾಗಿದ್ದು ದಾರಿ ಬಿಡುವ ವಿಚಾರದಲ್ಲಿ ಗಲಾಟೆಯಾಗಿದ್ದು, ಕೆಎಸ್ ಆರ್ ಟಿಸಿ  ಬಸ್ಸಿನ ಚಾಲಕನನ್ನು ಇನಾಯತ್ ಎಂಬುವವನು ಬಸ್ಸಿನಿಂದ ಕೆಳಗೆ ಇಳಿಸಿಕೊಂಡು ಹಲ್ಲೆ ಮಾಡಿ ಮನಬಂದಂತೆ ರಕ್ತಗಾಯಗಳಾಗುವುಂತೆ ಹಲ್ಲೆ ಮಾಡಿದ್ದು ಚಾಲಕನ ಸಹಾಯಕ್ಕೆ ಬಂದವರನ್ನು ಸಹ ರಕ್ತಗಾಯಗಳಾಗುವುಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ವಿಚಾರ ತಿಳಿದು  ತಕ್ಷಣ ಸ್ಥಳಕ್ಕೆ ಮಂಚೇನಹಳ್ಳಿ ಪಿಎಸೈ ಭಾಸ್ಕರ್ ಮತ್ತು ಸಿಬ್ಬಂದಿ ಆಗಮಿಸಿ ಆರೋಪಿಗಳಾದ ಇನಾಯತ್ ,ಸಲ್ಮಾನ್, ಇಮ್ರಾನ್, ಉಮರ್ ಎಂಬುವವರನ್ನು ಬಂದಿಸಿ ಠಾಣೆಗೆ ಕರೆದ್ಯೊದಿದ್ದು ಈ ಸಂಬಂದ ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 5, 2019, 11:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.