ಚಿಕ್ಕಬಳ್ಳಾಪುರ : ಮಂತ್ಲಿ ಹಣ ನೀಡಿಲ್ಲ ಎಂದು ಮಂಗಳಮುಖಿಯರ ಗುಂಪು ಬೆಂಗಳೂರಿನಿಂದ ಬಂದು ಒಬ್ಬ ಮಂಗಳಮುಖಿಯ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದಲ್ಲಿ ವಾಸ ಮಾಡುತ್ತಿರುವ ಜೆಸ್ಸಿಕಾ ಎಂಬ ಮಂಗಳಮುಖಿ ಸುಮಾರು 10 ವರ್ಷಗಳಿಂದ ಮಂಗಳಮುಖಿಯಾಗಿದ್ದಾರೆ. ತಂದೆ-ತಾಯಿಯನ್ನು ಬಿಟ್ಟು ಬಂದಿದ್ದಾಳೆ. ಈಕೆ ಪ್ರತಿ ತಿಂಗಳು ಸುಮಾರು 40 ಸಾವಿರ ಹಣ ಆಶಮ್ಮಗೆ ನೀಡಬೇಕು.
ಈಕೆ ಈ ತಿಂಗಳ ಮಂತ್ಲಿ ಹಣ ನೀಡಿಲ್ಲ ಎಂದು ಬೆಂಗಳೂರಿನಿಂದ 40 ಜನ ಮಂಗಳಮುಖಿಯರು ಒಂದು ಖಾಸಗಿ ವಾಹನದಲ್ಲಿ ಬಂದು ಏಕಾಏಕಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಪ್ರತಿ ನಿತ್ಯ ರಸ್ತೆಯಲ್ಲಿ ನಿಂತು ಬೇಡಿದರೆ ಒಂದು ಸಾವಿರ ಬರುತ್ತದೆ. ಅದರಲ್ಲಿ ಮನೆಯ ಬಾಡಿಗೆ 12 ಸಾವಿರ ಕೊಡಬೇಕು, ಇದರ ಜೊತೆಗೆ ಅವರಿಗೆ ₹40 ಸಾವಿರ ಹೇಗೆ ಕೊಡುವುದು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.