ಚಿಕ್ಕಬಳ್ಳಾಪುರ : ಮಹಾಮಾರಿ ಕೊರೊನಾ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತನ್ನ ಆರ್ಭಟ ಮುಂದುವರೆಸಿದ್ದು, ಇಂದು ಮತ್ತೊಂದು ಪಾಸಿಟಿವ್ ದೃಢಪಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೂ 21 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇಂದು ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಮತ್ತೊಂದು ಕೇಸ್ ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪಿ-790, 71ವಯಸ್ಸಿನ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಯಾರ ಸಂಪರ್ಕದಿಂದ ಸೋಂಕು ಹರಡಿದೆ ಎಂಬುದು ಇನ್ನೂ ತಿಳಿದಿಲ್ಲ.
8 ದಿನಗಳ ಹಿಂದೆಯೇ ಪತ್ನಿ ಮೃತಪಟ್ಟಿದ್ದಳು?: ಚಿಂತಾಮಣಿ ನಗರದಲ್ಲಿ ಮೊದಲ ಕೊವೀಡ್-19 ಸೋಂಕು ಇದೀಗ ದೃಢಪಟ್ಟಿದೆ. ಇದರಿಂದಾಗಿ ನಗರದ ಜನತೆ ಭಯಭೀತರಾಗಿದ್ದಾರೆ. ಸದ್ಯ ಸೋಂಕಿತ ವ್ಯಕ್ತಿಯ ಪತ್ನಿ ಕಳೆದ 8 ದಿನಗಳ ಹಿಂದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. 11ನೇ ವಾರ್ಡ್ ಸೇರಿ ನಗರದ ಜನತೆ ಭಯಭೀತರಾಗಿದ್ದಾರೆ.
ಸೋಂಕಿತ ವ್ಯಕ್ತಿಯು ವಾಸವಿದ್ದ 11ನೇ ವಾರ್ಡ್ ಸೇರಿ ಸುತ್ತಮುತ್ತಲಿನ ವಾರ್ಡ್ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರಬರದಂತೆ ತಾಲೂಕು ಆಡಳಿತ ಹಾಗೂ ನಗರಸಭೆ ಎಚ್ಚರಿಕೆ ನೀಡಿದೆ.