ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನದಲ್ಲಿ ನಾಗರ ಹಾವೊಂದು ಪ್ರತ್ಯಕ್ಷವಾಗಿ ಎರಡು ಗಂಟೆಗೂ ಅಧಿಕ ಸಮಯ ಮಾಲೀಕನಿಗೆ ಕಿರಿಕಿರಿ ಉಂಟು ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ನಗರದ ಪ್ರಭಾಕರ್ ಬಡಾವಣೆಯ ಮುಖ್ಯ ಧ್ವಾರದ ಬಳಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ನಾಗರಹಾವು ಸೇರಿಕೊಂಡಿದ್ದು, ಎರಡು ಗಂಟೆಗೂ ಅಧಿಕ ಸಮಯ ಕಿರಿಕಿರಿ ಉಂಟು ಮಾಡಿದೆ. ಬಳಿಕ ನಗರದ ಪೋಟೋಗ್ರಾಫರ್ ಆನಂದ್ ಹಾಗೂ ಸಂದೀಲ್ ಎಂಬ ವ್ಯಕ್ತಿಗಳು ಹಾವನ್ನು ರಕ್ಷಿಸಿ ನಗರದ ಹೊರವಲಯದ ಕೆರೆ ಬಳಿ ಬಿಟ್ಟಿದ್ದಾರೆ.