ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 81 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಚಿಕಿತ್ಸೆಯಿಂದ ಗುಣಮುಖರಾದ 29 ಸೋಂಕಿತರು ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ 29, ಬಾಗೇಪಲ್ಲಿ 20, ಚಿಂತಾಮಣಿ 2, ಗೌರಿಬಿದನೂರು 24, ಗುಡಿಬಂಡೆ 2, ಶಿಡ್ಲಘಟ್ಟ 4 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟಾರೇ ಸೋಂಕಿತರ ಸಂಖ್ಯೆ 6,848ಕ್ಕೆ ಏರಿಕೆಯಾಗಿದೆ. ಇನ್ನೂ 14 ಸೋಂಕಿತರಿಗೆ ಐಎಲ್ಐ ಸಂಪರ್ಕ ಸೇರಿದಂತೆ 67 ಸೋಂಕಿತರಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರ 10, ಬಾಗೇಪಲ್ಲಿ 1, ಚಿಂತಾಮಣಿ 4, ಗೌರಿಬಿದನೂರು 11, ಗುಡಿಬಂಡೆ 2, ಶಿಡ್ಲಘಟ್ಟದ ಓರ್ವ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 5,700 ಕ್ಕೆ ಏರಿಕೆಯಾಗಿದೆ.