ETV Bharat / state

ಚಿಕ್ಕಬಳ್ಳಾಪುರ: ಒಂದೇ ದಿನ 71 ಮಂದಿಗೆ ಕೊರೊನಾ, 2 ಸಾವು - Chikkaballapur Corona Increase

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಇಂದು 71 ಕೊರೊನಾ​​ ಪ್ರಕರಣಗಳು ದೃಢಪಟ್ಟಿವೆ.

author img

By

Published : Sep 18, 2020, 8:10 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 71 ಕೊರೊನಾ​​ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೇ, 113 ಸೋಂಕಿತರು ಗುಣಮುಖರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ 4, ಬಾಗೇಪಲ್ಲಿ 5, ಚಿಂತಾಮಣಿ 8, ಗೌರಿಬಿದನೂರು 50, ಶಿಡ್ಲಘಟ್ಟದಲ್ಲಿ 4 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 6337 ಏರಿಕೆಯಾಗಿದೆ. ಇನ್ನು 7 ಸೋಂಕಿತರಿಗೆ ಐಎಲ್ಐ ಸಂಪರ್ಕ, 10 ಡೊಮೆಸ್ಟಿಕ್ ಟ್ರಾವೆಲ್ ಹಾಗೂ ಓರ್ವ ಕೊರೊನಾ ವಾರಿಯರ್ಸ್ ಸೇರಿದಂತೆ 53 ಜನರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಧೃಡಪಟ್ಟಿದೆ.

ಇನ್ನೂ ಚಿಕ್ಕಬಳ್ಳಾಪುರ 39, ಬಾಗೇಪಲ್ಲಿ 2, ಚಿಂತಾಮಣಿ 16, ಗೌರಿಬಿದನೂರು 37, ಗುಡಿಬಂಡೆ 2, ಶಿಡ್ಲಘಟ್ಟದಲ್ಲಿ 17 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಯಾಗಿದ್ದಾರೆ. ಒಟ್ಟು ಗುಣಮುಖಗೊಂಡವರ ಸಂಖ್ಯೆ 5323 ಕ್ಕೆ ಏರಿಕೆಯಾಗಿದೆ. ಇನ್ನೂ ಗೌರಿಬಿದನೂರಿನ 50 ವರ್ಷದ ಮಹಿಳೆ ಹಾಗೂ ಚಿಕ್ಕಬಳ್ಳಾಪುರದ 65 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು,‌ ಒಟ್ಟು ಮೃತರ ಸಂಖ್ಯೆ 77 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.