ETV Bharat / state

ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಜನರಿಂದ ಮತದಾನ! - karnataka aseembly election

ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಚಿಕ್ಕಬಳ್ಳಾಪುರದಲ್ಲಿ ಮತ ಚಲಾಯಿಸಿ ರಾಜ್ಯದ ಗಮನ ಸೆಳೆದಿದ್ದಾರೆ.

ಒಂದೇ ಕುಟುಂಬದ 65 ಜನ ಮತದಾನ
ಒಂದೇ ಕುಟುಂಬದ 65 ಜನ ಮತದಾನ
author img

By

Published : May 10, 2023, 9:08 AM IST

Updated : May 10, 2023, 10:00 AM IST

ಒಂದೇ ಕುಟುಂಬದ 65 ಜನರಿಂದ ಮತದಾನ

ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಜನರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಒಂದೇ ಕುಟುಂಬದ 65 ಜನರು ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಗರದ ಬಾದಾಮ್ ಕುಟುಂಬ ಸದಸ್ಯರು ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತದಾನ ಮಾಡುತ್ತಾರಂತೆ.

ಈ ಬಗ್ಗೆ ಬಾದಾಮ್​ ಕುಟುಂಬ ಸದಸ್ಯ ಗೋಪಾಲ ಕೃಷ್ಣ ಮಾತನಾಡಿ, "ನಮ್ಮ ಕುಟುಂಬದ ಒಟ್ಟು 65 ಮತಗಳಿವೆ. ಪ್ರತಿ ಚುನಾವಣೆಯಲ್ಲೂ ಎಲ್ಲರೂ ಒಟ್ಟಿಗೆ ತೆರಳಿ ಮತದಾನ ಮಾಡುತ್ತೇವೆ. ಈವರೆಗೂ ಸುಮಾರು 15 ಬಾರಿ ಒಟ್ಟಿಗೆ ಮತದಾನ ಮಾಡಿದ್ದೇವೆ. ಮುಂದಿನ ಚುನಾವಣೆಗಳಲ್ಲೂ ಒಟ್ಟಿಗೆ ಮತದಾನ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ನಮ್ಮ ಹಕ್ಕನ್ನು ಚಲಾಯಿಸುತ್ತಿದ್ದೇವೆ" ಎಂದು ಹೇಳಿದರು.

ಚಿಕ್ಕಬಳ್ಳಾಪುರ ‌ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಗೊಂದಲವಿಲ್ಲದೇ ನಡೆಯುತ್ತಿದೆ. ಮತಗಟ್ಟೆಗಳ‌ಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಮತ ಚಲಾಯಿಸಿದ ಶ್ರೀ ಸಿದ್ದಲಿಂಗ ಸ್ವಾಮೀಜಿ- ವಿಡಿಯೋ

Last Updated : May 10, 2023, 10:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.