ETV Bharat / state

ಚಿಕ್ಕಬಳ್ಳಾಪುರ: 52 ಮಂದಿಗೆ ಕೊರೊನಾ ದೃಢ,ಇಬ್ಬರು ಬಲಿ - Chikkaballapur covid Center

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,698ಕ್ಕೆ ಏರಿಕೆಯಾಗಿದ್ದು 854 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 92 ವರ್ಷದ ವೃದ್ಧ ಮತ್ತು 42 ವರ್ಷದ ಪುರುಷ ನಿಧನರಾಗಿದ್ದು ಕೊರೊನಾದಿಂದ ಮೃತರಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

52 New corona cases reported in Chikkaballapur and two died
ಚಿಕ್ಕಬಳ್ಳಾಪುರ: 52 ಮಂದಿಗೆ ಕೊರೊನಾ ದೃಢ...ಇಬ್ಬರು ಬಲಿ
author img

By

Published : Aug 12, 2020, 9:12 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 52 ಮಂದಿಗೆ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು 81 ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡರೆ ಇಬ್ಬರು ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ 14, ಚಿಂತಾಮಣಿ 12, ಬಾಗೇಪಲ್ಲಿ 3, ಗೌರಿಬಿದನೂರು 13, ಗುಡಿಬಂಡೆ 5 ಮತ್ತು ಶಿಡ್ಲಘಟ್ಟದಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,698ಕ್ಕೆ ಏರಿಕೆಯಾಗಿದ್ದು 854 ಮಂದಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಚಿಕ್ಕಬಳ್ಳಾಪುರದ 92 ವರ್ಷದ ವೃದ್ಧ ಮತ್ತು 42 ವರ್ಷದ ಪುರುಷ ನಿಧನರಾಗಿದ್ದು ಕೊರೊನಾದಿಂದ ಮೃತರಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಎಲ್ಲಾ ಸೊಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಹೋಂ ಐಸೊಲೇಷನ್​​ನಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ 2,698 ಜನರಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಸೋಂಕಿತರಲ್ಲಿ 1,796 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.