ಚಿಕ್ಕಬಳ್ಳಾಪುರ : ಬಾಗೇಪಲ್ಲಿ ಪಟ್ಟಣದಲ್ಲಿ ಸುಮಾರು 5 ಸಾವಿರ ಟನ್ ಬೇವಿನ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ವಿಷಯ ತಿಳಿದು ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಲಾರಿ ಮತ್ತು ವಾಹನ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಚಿಂತಾಮಣಿ ತಾಲೂಕಿನ ಏನಿಗದಲೆ ಗ್ರಾಮದಲ್ಲಿ ಬೇವಿನ ಮರಗಳನ್ನು ರಾತ್ರಿ ಸಮಯದಲ್ಲಿ ಅಕ್ರಮವಾಗಿ ಕಡಿದು ಲಾರಿಯಲ್ಲಿ ತುಂಬಿಕೊಂಡು, ಬಾಗೆಪಲ್ಲಿ ಪಟ್ಟಣದ ಇಟ್ಟಿಗೆ ಕಾರ್ಖಾನೆಗಳ ಮಾಲೀಕರಿಗೆ ಮಾರಲು ದಳ್ಳಾಲಿಗಲು ಬಾಗೇಪಲ್ಲಿ ಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಉಪವಲಯ ಅರಣ್ಯಾಧಿಕಾರಿಗಳು ರಾಷ್ಟ್ರಿಯ ಹೆದ್ದಾರಿ 7ರ ಬಳಿ ರಾತ್ರಿ ಸುಮಾರು 3:45 ರ ವೇಳೆಗೆ ದಾಳಿ ಮಾಡಿದ್ದಾರೆ.
ಈ ದಾಳಿಯಲ್ಲಿ ಅಕ್ರಮವಾಗಿ ಕಡಿದ ಸುಮಾರು 5 ಸಾವಿರ ಟನ್ ಮರಗಳು, ಲಾರಿ ಹಾಗೂ ಚಾಲಕ ಉಮಾಪತಿ ಬಾಗೇಪಲ್ಲಿ ಎರಡನೇ ವಾರ್ಡ್ ಎಂಬುವರನ್ನು ವಶಕ್ಕೆ ಪಡೆದಿದ್ದು, ದೂರು ದಾಖಲಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಅರಣ್ಯ ತಿಳಿಸಿದ್ದಾರೆ.