ಚಿಂತಾಮಣಿ :ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಜಿ ಶಾಸಕ ಡಾ. ಎಂ. ಸಿ. ಸುಧಾಕರ್ ಬಣ ತೊರೆದು ಜೆಡಿಎಸ್ ಪಕ್ಷಕ್ಕೆ ಸುಮಾರು 20 ಕ್ಕೂ ಹೆಚ್ಚು ಮುಖಂಡರು ಇಂದು ಸೇರ್ಪಡೆಗೊಂಡಿದ್ದಾರೆ.
ಚೆನ್ನಮ್ಮನವರ ಬಲರಾಮ್ ರೆಡ್ಡಿ ಕುಟುಂಬದವರು ಮಾಜಿ ನಗರಸಭೆ ಸದಸ್ಯರದ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಮತ್ತು ಮುಖಂಡರಾದ ಮಧು ನೇತೃತ್ವದಲ್ಲಿ ಆನಂದ್ ಕುಮಾರ್ ,ಮೋಹನ್ ಕುಮಾರ್, ರಾಜಶೇಖರ್ ರೆಡ್ಡಿ, ರವಿಕುಮಾರ್, ಶ್ರೀನಿವಾಸ್, ಸೀನಾ ಪಿ ಟಿ ಎಂ ,ವೆಂಕಟರ ರವಣಪ್ಪ' ಅನ್ಸರ್, ಪಾಂಡುರಂಗ ರೆಡ್ಡಿ ,ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಶಾಸಕರಾದ ಎಂ. ಕೃಷ್ಣ ರೆಡ್ಡಿ ಹೂವಿನ ಹಾರ ಹಾಕುವುದರ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಮಧು , ಅಗ್ರಹಾರ ಮುರಳಿ,ಮಂಜುನಾಥ್,ನಟರಾಜ್ ,ಗಂಗಾಧರ , ದೇವಳಂ ಶಂಕರ್,ಮಾಜಿ ನಗರಸಭಾ ಸದಸ್ಯ,ವೆಂಕಟೇಶ್, ಮಸಳಹಳ್ಳಿ ಮಂಜು ,ಭಾಸ್ಕರ್ ಫಯಾಸ್ ಪಾಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.