ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 140 ಕೊರೊನಾ ಸೋಂಕಿತ ಪ್ರಕರಣಗಳು ಧೃಡಪಟ್ಟಿದ್ದು, 101 ಮಂದಿ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರ 90, ಚಿಂತಾಮಣಿ 18, ಗೌರಿಬಿದನೂರು 15, ಬಾಗೇಪಲ್ಲಿ 16,ಗುಡಿಬಂಡೆ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು ಇಂದು 140 ಸೊಂಕಿತರು ಧೃಡಪಟ್ಟಿದ್ದು ಒಟ್ಟಾರೇ ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ 5,869ಕ್ಕೆ ಏರಿಕೆಯಾಗಿದೆ. ಇದರಲ್ಲಿ 8 ಸೊಂಕಿತರಿಗೆ ಐಎಲ್ಐ ಸಂಪರ್ಕ 66 ಜನರಿಗೆ ಡಮೆಸ್ಟಿಕ್ ಟ್ರಾವೆಲ್ ಹಾಗೂ ಉಳಿದ 64 ಜನರಿಗೆ ಸೊಂಕಿತರ ಸಂಪರ್ಕದಿಂದ ಸೊಂಕು ಧೃಡಪಟ್ಟಿದೆ.
ಇನ್ನೂ ಚಿಂತಾಮಣಿ 31 ಸೋಂಕಿತರು, ಚಿಕ್ಕಬಳ್ಳಾಪುರ 13, ಬಾಗೇಪಲ್ಲಿ 18, ಶಿಡ್ಲಘಟ್ಟ 8, ಗೌರಿಬಿದನೂರು 22 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 9 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖಗೊಂಡವರ ಸಂಖ್ಯೆ 4,826 ಕ್ಕೆ ಏರಿಕೆಯಾಗಿದೆ.
ಸದ್ಯ 969 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್, ಹೋಂ ಐಸೋಲೇಷನ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.