ಚಾಮರಾಜನಗರ: ವಯಸ್ಸು 30 ದಾಟಿದರೂ ಮದುವೆಯಾಗಲಿಲ್ಲ ಎಂಬ ಚಿಂತೆಗೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರು ಪಟ್ಟಣದ ವಿನೋದ್(34) ಮೃತ ದುರ್ದೈವಿ. ಅರಣ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ನಂತರ ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ತನ್ನ ಸಹೋದರರು, ಸಹೋದರಿಯರಿಗೆ ವಿವಾಹವಾದರೂ ತನಗಿನ್ನೂ ಆಗಿಲ್ಲವೆಂಬ ಖಿನ್ನತೆಯಲ್ಲಿ ಯುವಕ ಮದ್ಯ ವ್ಯಸನಿಯಾಗಿದ್ದನು. ಅದೇ ಚಿಂತೆಯಲ್ಲಿ ಮದ್ಯದ ಅಮಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಪಾವಗಡದ ಬಳಿ ಖಾಸಗಿ ಬಸ್ ಪಲ್ಟಿ: 8ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ