ಚಾಮರಾಜನಗರ: ಸ್ನೇಹಿತನ ಆಲೆಮನೆಗೆ ತೆರಳುತ್ತಿದ್ದ ಯುವಕ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಂದಹಳ್ಳಿ ಗ್ರಾಮದ ಸಚಿನ್(24) ಮೃತ ಯುವಕ. ಸಚಿನ್ ಮತ್ತು ಪ್ರಸಾದ್ ಇಬ್ಬರು ಸ್ನೇಹಿತರಾಗಿದ್ದು, ಕಳೆದ ಹಲವು ದಿನಗಳಿಂದ ಪ್ರಸಾದ್ನ ಆಲೆಮನೆಯಲ್ಲೇ ಮಲಗಲು ಸಚಿನ್ ತೆರಳುತ್ತಿದ್ದ. ಜೋರು ಮಳೆಯಿಂದಾಗಿ ಹಾವೊಂದು ಆಲೆಮನೆಯೊಳಗೆ ಸೇರಿಕೊಂಡು, ಇಂದು ಬೆಳಗಿನ ಜಾವ ಮಲಗಿದ್ದ ಸಚಿನ್ ಕಾಲಿಗೆ ಕಚ್ಚಿದೆ. ಆದ್ರೆ ಹಾವು ಕಚ್ಚಿರುವುದು ಸಚಿನ್ಗೆ ಗೊತ್ತಾಗಿರಲಿಲ್ಲ.
ಇದನ್ನೂ ಓದಿ: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 17 ಕೋಣ ರಕ್ಷಣೆ; ಕಾರವಾರದಲ್ಲಿ 4 ಮಂದಿ ಬಂಧನ
ಕಾಲು ಉರಿಯುತ್ತಿದೆ ಎಂದು ಸಚಿನ್ ನನ್ನು ಜಿಲ್ಲಾಸ್ಪತ್ರೆಗೆ ಕರೆ ತಂದರಾದರೂ ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿದೆ. ಸದ್ಯ, ಯಳಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.