ಚಾಮರಾಜನಗರ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಅಜರುದ್ದಿನ್ 20 ಕ್ಕೂ ಹೆಚ್ಚು ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿ ಅನುಭವ ಸವಿದರು.
![X cricket player ajaruddin visited bandipura forest](https://etvbharatimages.akamaized.net/etvbharat/prod-images/kn-cnr-av-06-safari-7202614_15082019213351_1508f_1565885031_104.jpg)
ಪ್ರಸಿದ್ಧ ಕ್ರಿಕೆಟರ್ಗಳಲ್ಲೊಬ್ಬರಾದ ಅಜರುದ್ದಿನ್ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂಡೀಪುರದಲ್ಲಿ ಸಫಾರಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಯೊಂದಿಗೆ ಪ್ರವಾಸಿಗರೂ ಮುಗಿಬಿದ್ದರು.
ಅಭಿಮಾನಿಗಳ ಅಕ್ಕರೆಗೆ ಮಣಿದು ಸಖತ್ತಾಗೇ ಪೋಸ್ ಕೊಟ್ಟರು ಅಜರುದ್ದಿನ್. ಸಫಾರಿಯಲ್ಲಿ ಆನೆ ಹಿಂಡು, ಜಿಂಕೆ, ನವಿಲು ಕಾಣಿಸಿಕೊಂಡಿದ್ದು, ಸತತ ಮಳೆಗೆ ಹಸಿರ ಹೊದಿಕೆ ಹೊದ್ದಿರುವ ಬಂಡೀಪುರ ಕಾಡನ್ನು ಎಂಜಾಯ್ ಮಾಡಿ ಮೈಸೂರು ಮೂಲಕ ಬೆಂಗಳೂರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.
![X cricket player ajaruddin visited bandipura forest](https://etvbharatimages.akamaized.net/etvbharat/prod-images/kn-cnr-av-06-safari-7202614_15082019213351_1508f_1565885031_222.jpg)