ಚಾಮರಾಜನಗರ: ಕಾಣೆಯಾಗಿದ್ದ ಶಿವಮ್ಮ ಎಂಬಾಕೆ ಶವವಾಗಿ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಲ ವರ್ಷಗಳ ಹಿಂದೆ ಮೃತ ಶಿವಮ್ಮ ನೆರೆ ಮನೆಯವರಿಗೆ ಒಂದು ಲಕ್ಷ ರೂ. ಸಾಲ ನೀಡಿದ್ದರಂತೆ. ಕೊಟ್ಟಿದ್ದ ಹಣವನ್ನು ವಾಪಸ್ ಕೇಳಿದಾಗ ಪದೇ ಪದೆ ನೆಪ ಹೇಳುತ್ತಿದ್ದರು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾಲಿಗೆ ಕಲ್ಲು ಕಟ್ಟಿ ಗ್ರಾಮದ ಬಾವಿಗೆ ಬಿಸಾಡಿದ್ದಾರೆ ಎನ್ನಲಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇನ್ನು, ಶುಕ್ರವಾರವಷ್ಟೇ ಮಹಿಳೆ ಕಾಣೆಯಾಗಿದ್ದಾರೆಂದು ಪ್ರಕರಣ ದಾಖಲಾಗಿತ್ತು.