ಚಾಮರಾಜನಗರ: ಕೂಲಿಗೆ ಕರೆಯಲಿಲ್ಲ ಎಂದು ಉಂಟಾದ ಮಹಿಳೆಯರಿಬ್ಬರ ಬಡಿದಾಟದಲ್ಲಿ ಓರ್ವಳು ಕೊಲೆಗೀಡಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೀರಮ್ಮ(56) ಕೊಲೆಯಾಗಿರುವ ಮಹಿಳೆ. ಕೊಲೆ ಆರೋಪಿಗಳಾದ ಮಸಣಶೆಟ್ಟಿ ಹಾಗೂ ಶಿವಮ್ಮ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರಿಶಿನ ಕೀಳಲು ಕೆಲಸಕ್ಕೆ ಕೊಲೆಯಾದ ಸೀರಮ್ಮ ಕರೆಯಲಿಲ್ಲ ಎಂದು ಆರೋಪಿ ಶಿವಮ್ಮ ಜಗಳ ತೆಗೆದಿದ್ದಾರೆ. ಇಬ್ಬರ ಜಗಳದಲ್ಲಿ ಶಿವಮ್ಮ ಪತಿ ಮಸಣಶೆಟ್ಟಿ ಬಂದು ಸೀರಮ್ಮನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಮಸಣಶೆಟ್ಟಿಯ ಹಲ್ಲೆಯಿಂದ ಸೀರಮ್ಮ ರಸ್ತೆಗೆ ಬಿದ್ದಾಗ ರಸ್ತೆ ಬದಿಯ ಕಲ್ಲು ತಲೆಗೆ ತಗುಲಿ ತೀವ್ರ ರಕ್ತಸ್ರಾವವಾಗಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸೀರಮ್ಮ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸರು ಮಸಣಶೆಟ್ಟಿ, ಶಿವಮ್ಮನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಪಿಎಸ್ಐಗೇ ಮಕ್ಮಲ್ ಟೋಪಿ ಹಾಕಿದ ಚಾಲಾಕಿ: ಲಕ್ಷಾಂತರ ರೂ. ಕಳೆದುಕೊಂಡ ಕಲಬುರಗಿಯ ಪಿಎಸ್ಐ!