ಚಾಮರಾಜನಗರ : ಕಾಡಾನೆಯೊಂದರ ದಾಳಿಯಿಂದಾಗಿ ಅರಣ್ಯಾಧಿಕಾರಿಯ ವಾಹನ ಪಲ್ಟಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಶಿವಕುಮಾರಪುರ-ಕುರುಬರ ಹುಂಡಿ ಸಮೀಪ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ವ್ಯಾಪ್ತಿಗೆ ಬರುವ ಜಮೀನಿನಲ್ಲಿ ಬೀಡುಬಿಟ್ಟಿದ್ದ ಕಾಡಾನೆಯನ್ನು ಓಡಿಸಲು ಬಂದ ಅರಣ್ಯ ಸಿಬ್ಬಂದಿಯ ಜೀಪಿನ ಮೇಲೆ ಏಕಾಏಕಿ ಎರಗಿದ ಕಾಡಾನೆ, ಜೀಪಿನ ಮುಂಭಾಗ ತುಳಿದು, ವಾಹನವನ್ನು ಪಲ್ಟಿ ಹೊಡೆಸಿ ರೋಷಾವೇಷ ತೋರಿದೆ.
![wild Elephant crushed forest officers jeep in chamarajanagar](https://etvbharatimages.akamaized.net/etvbharat/prod-images/kn-cnr-01-aane-av-ka10038_07012022111751_0701f_1641534471_409.jpg)
ಸದ್ಯ ಜೀಪಿನಲ್ಲಿ ಮೂವರು ಸಿಬ್ಬಂದಿ ಇದ್ದರೆಂದು ತಿಳಿದು ಬಂದಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಗರ್ಭಿಣಿ ಸಾವು