ಚಾಮರಾಜನಗರ: ಜಿಲ್ಲಾಡಳಿತ ಭವನಕ್ಕೆ ಬಂದಿದ್ದ ವಿಶೇಷ ಅತಿಥಿಯೊಬ್ಬನನ್ನು ಕಂಡ ಸಿಬ್ಬಂದಿ ಅನಾಮಿಕನ ಪರಿಚಯವಿಲ್ಲದೇ ಕೆಲ ತಾಸು ಭಯಗೊಂಡಿದ್ದ ಘಟನೆ ನಡೆದಿದೆ.
ವಿಷಯ ಅರಿತು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಅತ್ತಿಂದಿತ್ತ ಓಡಾಡುತ್ತಿದ್ದ ಪುನುಗು ಬೆಕ್ಕನ್ನು ರಕ್ಷಿಸಿ ಅದನ್ನು ಸಮೀಪದ ಜಮೀನಿಗೆ ಬಿಟ್ಟು ಬಂದಿರುವುದಾಗಿ ಈಟಿವಿ ಭಾರತಕ್ಕೆ ಮೂಲಗಳು ತಿಳಿಸಿವೆ.