ETV Bharat / state

ಕೇವಲ 7 ಸಾವಿರ ರೂ. ಸಾಲಕ್ಕೆ ಗಂಡನನ್ನು ಬಿಟ್ಟ ಪತ್ನಿ: ಇಬ್ಬರು ಮಕ್ಕಳು, ಪತಿ ಕಂಗಾಲು!! - ಚಾಮರಾಜನಗರದಲ್ಲಿ ಕೇವಲ ಏಳು ಸಾವಿರಕ್ಕೆ ಪತಿ ತೊರೆದ ಪತ್ನಿ

ಚಾಮರಾಜನಗರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಏಳು ಸಾವಿರ ಸಾಲಕ್ಕೆ ಹೆಂಡ್ತಿಯೊಬ್ಬಳ್ಳು ಗಂಡ ಮತ್ತು ಮಕ್ಕಳನ್ನು ಬಿಟ್ಟಿರುವ ಘಟನೆ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ.

Wife leaving husband for debt in Chamarajanagar, Wife leaves husband in Chamarajanagar, Chamarajanagar news, ಸಾಲದ ಹೊರೆಗೆ ಪತಿ ತೊರೆದ ಪತ್ನಿ, ಚಾಮರಾಜನಗರದಲ್ಲಿ ಕೇವಲ ಏಳು ಸಾವಿರಕ್ಕೆ ಪತಿ ತೊರೆದ ಪತ್ನಿ, ಚಾಮರಾಜನಗರ ಸುದ್ದಿ,
ಕೇವಲ 7 ಸಾವಿರ ಸಾಲಕ್ಕೆ ಗಂಡನನ್ನು ಬಿಟ್ಟ ಪತ್ನಿ
author img

By

Published : Jan 20, 2022, 10:15 AM IST

ಚಾಮರಾಜನಗರ: ಲಕ್ಷಾಂತರ ರೂಪಾಯಿ ಸಾಲ ಮಾಡಿದವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ‌. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡನ ಸಣ್ಣ ಸಾಲಕ್ಕೆ ಬೇಸತ್ತು ಮನೆಯನ್ನೇ ತೊರೆದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಹೌದು..., ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಶಿವಕುಮಾರ್ ಎಂಬಾತ ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಪ್ರೇಮಾ ಎಂಬಾಕೆಯನ್ನು 9 ವರ್ಷಗಳ ಹಿಂದೆ ವಿವಾಹವಾಗಿದೆ. ಈ ದಂಪತಿಗೆ 5 ವರ್ಷ ಹಾಗೂ ಮೂರುವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ.

ಓದಿ: ಹಾವು - ಏಣಿ ಆಟದಂತೆ ಕೋವಿಡ್​ ಪ್ರಕರಣದ ವರದಿ: ಇಂದು ಮೂರು ಲಕ್ಷದ ಗಡಿ ದಾಟಿದ ಕೊರೊನಾ!

ಎರಡು ತಿಂಗಳುಗಳ ಹಿಂದೆ ಹಬ್ಬಕ್ಕೆಂದು ತವರಿಗೆ ತೆರಳಿರುವ ಪ್ರೇಮಾ ಈಗ ಸಾಲ ತೀರಿಸುವ ತನಕ ತಾನು ಮನೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿರುವುದಕ್ಕೆ ಪತಿ ಶಿವಕುಮಾರ್ ಕಂಗಾಲಾಗಿದ್ದಾನೆ‌. ಸಾಲವನ್ನು ಆದಷ್ಟು ಬೇಗ ತೀರಿಸುತ್ತೇನೆ. ನಿನ್ನ ಬಳಿ ಹಣ ಕೇಳುವುದಿಲ್ಲ ಎಂದರೂ ಪ್ರೇಮಾ ಒಪ್ಪದೇ ತವರಲ್ಲಿ ಕುಳಿತಿದ್ದಾರೆ. ಪತ್ನಿ ಪ್ರೇಮಾದ ಈ ನಡೆಗೆಗೆ ಮಕ್ಕಳು ಮತ್ತು ಪತಿ ಕಂಗಾಲಾಗಿದ್ದಾರೆ.

ತನ್ನ ಪತ್ನಿಗೆ ಬುದ್ಧಿ ಹೇಳಿ ತನ್ನೊಟ್ಟಿಗೆ ಇರುವಂತೆ ಮಾಡಬೇಕೆಂದು ಶಿವಕುಮಾರ್ ಸದ್ಯ ಮಹಿಳಾ‌ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾನೆ.‌ ಪೊಲೀಸರು‌ ಮುಂದಿನ ಕ್ರಮ‌ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.