ಗುಂಡ್ಲುಪೇಟೆ(ಚಾಮರಾಜನಗರ) : ತಾಲೂಕಿನ ಹಂಗಳ ಹೋಬಳಿ ಕೇಂದ್ರದ ಬಡಾವಣೆಯಲ್ಲಿ ಕಳೆದ ಹನ್ನೆರಡು ದಿನದಿಂದ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಈ ಹಿನ್ನೆಲೆ ಒಂದು ಕಿಲೋಮೀಟರ್ ದೂರದಲ್ಲಿರುವ ಕೆರೆಯಲ್ಲಿ ಇರುವ ಕೊಳವೆ ಬಾವಿಯಿಂದ ನೀರು ತಂದು ಬಳಕೆ ಮಾಡುತ್ತಿದ್ದಾರೆ.
ಈಗಾಗಲೇ ಬಡಾವಣೆಯ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಪುರುಷರಾದರೆ ಸೈಕಲ್ ಅಥವಾ ಬೈಕ್ಗಳಿಂದ ನೀರು ತರುತ್ತಾರೆ. ಮಹಿಳೆಯರು ಕಿಲೋಮೀಟರ್ ಗಟ್ಟಲೇ ತಲೆಯ ಮೇಲೆ ನರು ಹೊರಬೇಕಿದೆ ಎಂದು ಬಾಬುಜಗಜೀವನ್ ರಾಂ ಬಡಾವಣೆಯ ರಾಜೇಶ್ ನೋವು ತೋಡಿಕೊಂಡಿದ್ದಾರೆ.
ಪ್ರತಿದಿನ ಕೆಲಸಕ್ಕೆ ಹೋಗುವ ಮುಂಚೆ ನೀರು ತರಲೇ ಬೇಕು. ಇದರಿಂದಾಗಿ ಅನೇಕರು ದಿನದ ಕೂಲಿಯನ್ನೆ ಕಳೆದುಕೊಳ್ಳಬೇಕಿದೆ. ಕನಿಷ್ಟ ವಾರಕ್ಕೆ ಎರಡು ಬಾರಿಯಾದರೂ ನೀರು ಬಿಡುವಂತೆ ಗ್ರಾಮ ಪಂಚಾಯತಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.